ಕರಾಟೆ ಸ್ಪರ್ಧೆ : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಸಂತ ವಿಕ್ಟರನ ಬಾಲಿಕ ಪ್ರೌಢ ಶಾಲೆ ಜಂಟಿ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆ ಯಾಗಿರುತ್ತಾರೆ.

17ರ ವಯೋಮಾನದ ಬಾಲಕರ ವಿಭಾಗದಲ್ಲಿ 10ನೇ ತರಗತಿಯ ನೂತನ್ ಪ್ರಥಮ, 10ನೇ ತರಗತಿಯ ಪ್ರಾಪ್ತ  ಪ್ರಥಮ, 10ನೇ ತರಗತಿಯ ಅಕ್ಷಯ್.ಕೆ.ಕೆ. ದ್ವಿತೀಯ ಹಾಗೂ 8ನೇ ತರಗತಿಯ ಚಿಂತನ್ ದ್ವಿತೀಯ ಸ್ಥಾನ, ಪಡೆದಿರುತ್ತಾರೆ.

17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ವರ್ಷಿ ರೈ ದ್ವಿತೀಯ, 10ನೇ ತರಗತಿಯ ಭವಿಷಾ.ಕೆ. ದ್ವಿತೀಯ, 9ನೇ ತರಗತಿಯ ದೀಕ್ಷಾ.ಬಿ. ದ್ವಿತೀಯ ಸ್ಥಾನ ಪಡೆದಿರುತ್ತಾರೆ.





















































 
 

14ರ ವಯೋಮಾನದ ಬಾಲಕರ ವಿಭಾಗದಲ್ಲಿ 7ನೇ ತರಗತಿಯ ಅವಿ.ವಿ.ರೈ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 7ನೇ ತರಗತಿಯ ಅಭಿಜ್ಞಾ ಶಾಂಭವಿ ಪ್ರಥಮ, 6ನೇ ತರಗತಿಯ ಕೆ.ಪಿ.ಲಹರಿ ರೈ ಪ್ರಥಮ, 7ನೇ ತರಗತಿಯ ಮಹತಿ.ಎಂ. ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top