ಬೆಳ್ತಂಗಡಿ : ಅಕ್ರಮ ಕೋಳಿ ಅಂಕ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ 5 ಮಂದಿಯನ್ನು ಬಂಧಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪೇರಪಲ್ಕೆ ಗುಡ್ಡದಲ್ಲಿ ನಡೆದಿದೆ.
ದೇವಪ್ಪ, ಉಮ್ಮನ ಗೌಡ, ಪರಮೇಶ್ವರ, ರಾಮಣ್ಣ ಬಾಲಕೃಷ್ಣ ಬಂಧಿತರು.
ಪೇರಲ್ಲಪಲ್ಕೆ ಎಂಬಲ್ಲಿನ ಗುಡ್ಡೆ ಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣಾ ಪಿಎಸ್ ಐ ಕಿಶೋರ್ ಪಿ. ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 5,410/- ರೂಪಾಯಿ ನಗದು ಹಣ, 3 ಹುಂಜ ಕೋಳಿಗಳು, 2 ಕೋಳಿ ಅಂಕಕ್ಕೆ ಬಳಸುವ ಕತ್ತಿಗಳು ಹಾಗೂ ಸ್ಥಳದಲ್ಲಿದ್ದ 4 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























