ವಿಟ್ಲ: ಚಂದಳಿಕೆ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಧನಸಹಾಯ ಹಸ್ತಾಂತರಿಸಲಾಯಿತು.
ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಕುರುಂಬಳ ನಿವಾಸಿ ತರೇಂದ್ರ ಡೆಪ್ಪಿನಿ ಅವರ ಚಿಕಿತ್ಸೆಗೆ ಧನಸಹಾಯವನ್ನು ಅವರ ಮನೆಯವರಿಗೆ ಹಸ್ತಾಂತರಿಸಲಾಯಿತು.
ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಂಕರ ಭಟ್ ಬದನಾಜೆ. ಕಾರ್ಯಧ್ಯಕ್ಷ ಕೃಷ್ಣಯ್ಯ ಕೆ ಅರಮನೆ ಹಾಗೂ ಕ್ಲಬ್ ನ ಅಧ್ಯಕ್ಷ ಗಂಗಾಧರ ಚಂದಳಿಕೆ. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಅಳಿಕೆ. ಕಾರ್ಯದರ್ಶಿ ಜಗದೀಶ ಗೌಡ ಎಂ., ಗೌರವಧ್ಯಕ್ಷ ಕೃಷ್ಣ ಮುದೂರು. ಮತ್ತು ಜಯರಾಮ್ ಪೂಜಾರಿ ಪರನೀರು. ಹಾಗೂ ಪದಾಧಿಕಾರಿಗಳು. ಸದಸ್ಯರು ಉಪಸ್ಥಿತರಿದ್ದರು.