ಬೆಳ್ತಂಗಡಿ : ಮಹಿಳೆಯೊಬ್ಬರು ಬಾವಿಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ಕೃಷಿ ಇಲಾಖೆಯ ಸೀಡ್ ಫಾರ್ಮ್ ರಸ್ತೆ ಬಳಿ ನಡೆದಿದೆ.
ನಿವೃತ್ತ ಬ್ಯಾಂಕ್ ಉದ್ಯೋಗಿ ಜೀವಂದರ್ ಪಡಿವಾಳ ಅವರ ಪತ್ನಿ ಸುಮಾಲಿನಿ ಜೈನ್ (63) ಮೃತಪಟ್ಟ ಮಹಿಳೆ.
ಮೃತರು ಪತಿ, ಪುತ್ರ, ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.