ವಿಟ್ಲ: ವಿಟ್ಲದ ನೆಕ್ಕಿಲಾರು ನಿವಾಸಿಯೊಬ್ಬರು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ ಎಂದು ವಿಟ್ಲ ಪೊಲೀಸರಿಗೆ ದೂರು ನೀಡಲಾಗಿದೆ.
ಸಂಘಕ್ಕೆ ಹಣ ಕಟ್ಟಲೆಂದು ಮನೆಯಿಂದ ಹೋದ ಹೇಮಂತ್ (37) ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
ಹೇಮಂತ್ ಎಂಬವರು ಜುಲೈ 22ರಂದು ನೆಕ್ಕಿಲಾರು ಮನೆಯಿಂದ ಸಂಘಕ್ಕೆ ಹಣ ಕಟ್ಟಲು ಹೋದವರು ಮನೆಗೆ ಬಾರದೇ ಇದ್ದು ಅವರ ಮೊಬೈಲ್ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಎಂದು ಬರುತ್ತದೆ. ಸಂಬಂಧಿಕರಲ್ಲಿ ವಿಚಾರಿಸಿದಾಗ ಎಲ್ಲಿಯೂ ಹೇಮಂತ್ ಪತ್ತೆಯಾಗಿಲ್ಲ.ಹೇಮಂತ್ ರವರು 5 ವರೆ ಅಡಿ ಎತ್ತರವಿದ್ದು, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಗೋಧಿ ಮೈ ಬಣ್ಣ, ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.