ಪುತ್ತೂರು: ಪ್ರತಿಷ್ಠಿತ ವಸ್ತ್ರ ಮಳಿಗೆ ಎಂ. ಸಂಜೀವ ಶೆಟ್ಟಿ ಸಿಲ್ಕ್ಡ್ & ರೆಡಿಮೇಡ್ ನಲ್ಲಿ ಜು.26 ರಿಂದ ಆರಂಭಗೊಂಡ ಈ ಬಾರಿಯ ಆಷಾಢ ಮಾರಾಟಕ್ಕೆ ಗ್ರಾಹಕ ವರ್ಗದಿಂದ ಭರಪೂರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಳಿಗೆಯಲ್ಲಿ ಪ್ರಖ್ಯಾತ ಮಿಲ್‌ಗಳಿಂದ ನೇರವಾಗಿ ಖರೀದಿಸಿದ ಸೀರೆ, ರೆಡಿಮೇಡ್ ಬಟ್ಟೆಗಳನ್ನು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು. ಆರಂಭದ ದಿನವೇ ಗ್ರಾಹಕರಿಂದ ಭರಪೂರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅತೀ ದೊಡ್ಡಮಟ್ಟದಲ್ಲಿ ಗ್ರಾಹಕರಿಗೋಸ್ಕರ ಸಾರಿ ಮತ್ತು ಇನ್ನಿತರ ಜವುಳಿಗಳನ್ನು ಖರೀದಿ ಮಾಡಿ ಮಾರಾಟ ಮಾಡಲಾಗುತ್ತಿದೆ.
ಪ್ರತಿ ದಿನವು ಹೊಸ ಹೊಸ ಸ್ಟಾಕ್‌ಗಳನ್ನು ಗ್ರಾಹಕರಿಗೆ ಒದಗಿಸುತ್ತಿರುದರ ಜತೆಗೆ ರಿಯಾಯಿತಿ ದರದ ಮಾರಾಟ ಸಂಸ್ಥೆಯ ವಿಶೇಷತೆಯಾಗಿದೆ. ಪುತ್ತೂರು, ಸುಳ್ಯ ಬೆಳ್ತಂಗಡಿ, ಮಡಿಕೇರಿ, ಮೈಸೂರು, ಬೆಂಗಳೂರಿನಿಂದ ಕೂಡ ಈ ಆಷಾಢ ಮಾಸದಲ್ಲಿ ಏರ್ಪಡಿಸುವ ಅತೀ ದೊಡ್ಡ ಮಾರಾಟಕ್ಕೆ ಜನರು ಧಾವಿಸಿ ಬರುತ್ತಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.