ಶಿರಾಡಿ: ಶಿರಾಡಿ ಘಾಟ್ ನ ದೋಣಿಗಲ್ ನಲ್ಲಿ ಗುಡ್ಡ ಕುಸಿತದ ಪರಿಣಾಮ ಮಂಗಳೂರು – ಬೆಂಗಳೂರು ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಶಿರಾಡಿ ಘಾಟ್’ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಶುಕ್ರವಾರ ಶಿರಾಡಿ ಘಾಟ್ ನಲ್ಲಿ ರೈಲು ಸಂಪರ್ಕ ಕಡಿತಗೊಂಡಿತ್ತು.
ದೋಣಿಗಲ್ ಬಳಿ ಗುಡ್ಡವೊಂದು ಕುಸಿಯುತ್ತಿದ್ದು, ರಸ್ತೆಯನ್ನು ಸಂಪೂರ್ಣ ಆವರಿಸಿಕೊಂಡಿತ್ತು. ಕುಸಿದ ಮಣ್ಣನ್ನು ಸರಿಸುವಲ್ಲಿ ಜೆಸಿಬಿ ಮೂಲಕ ಕಾರ್ಯ ನಿರ್ವಹಿಸಿ, ವಾಹನ ಸಾಗಾಟಕ್ಕೆ ಅನುವು ಮಾಡಿಕೊಡಲಾಯಿತು.
ಸಂಚಾರಕ್ಕೆ ಸಂಪೂರ್ಣ ತೊಡಕ್ಕಾಗಿದ್ದು ಮಂಗಳೂರು ಕಡೆಯಿಂದ ಹೋಗಿರುವ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದು, ಮಣ್ಣು ತೆರವಿಗೆ ಕಾಯುತ್ತಿದ್ದ ದೃಶ್ಯ ಕಂಡುಬಂತು. ಬೆಂಗಳೂರು, ಹಾಸನ ಕಡೆಯಿಂದ ಬರುತ್ತಿರುವ ವಾಹನಗಳನ್ನು ಪರ್ಯಾಯ ರಸ್ತೆಯಲ್ಲಿ ಕಳುಹಿಸಿಕೊಡಲಾಯಿತು. ಗುಡ್ಡದ ಮಣ್ಣು ಮತ್ತಷ್ಟು ರಸ್ತೆಗೆ ಸುರಿಯುವ ಅಪಾಯ ಇದ್ದು, ರಸ್ತೆ ಸಂಪೂರ್ಣ ಮುಚ್ಚಿ ಹೋಗುವ ಭೀತಿ ಎದುರಾಗಿದೆ.