ಪುತ್ತೂರು: ಪ್ರತಿಷ್ಠಿತ ವಸ್ತ್ರ ಮಳಿಗೆ ‘ಎಂ. ಸಂಜೀವ ಶೆಟ್ಟಿ ಸಿಲ್ಕ್ಸ್ & ರೆಡಿಮೇಡ್ ’ ನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ರಿಡೆಕ್ಷನ್ ಮಾರಾಟ ಜು.26 ಶುಕ್ರವಾರದಿಂದ ಆರಂಭಗೊಳ್ಳಲಿದೆ.
ಸುಮಾರು 80 ವರ್ಷಗಳ ವಸ್ತ್ರ ಪರಂಪರೆ ಹೊಂದಿರುವ ಎಂ.ಸಂಜೀವ ಶೆಟ್ಟಿ ಸಿಲ್ಕ್ಸ್ & ರೆಡಿಮೇಡ್ಸ್ ಆಷಾಢ ಮಾಸದಲ್ಲಿ ಮಹಿಳೆಯರು, ಪುರುಷರು, ಮಕ್ಕಳಿಗಾಗಿ ರಿಯಾಯಿತಿ ದರದಲ್ಲಿ ವಸ್ತ್ರಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಖ್ಯಾತ ಮಿಲ್ ಗಳಿಂದ ನೇರವಾಗಿ ಖರೀದಿಸಿದ ಹೊಸ ಡಿಸೈನ್ ಸೀರೆಗಳು ಹಾಗೂ ರೆಡಿಮೇಡ್ ಬಟ್ಟೆಗಳನ್ನು ಅತೀ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಲಿದೆ.
ಆಷಾಢ ಮಾರಾಟದ ಅಂಗವಾಗಿ ಪ್ರತೀದಿನ ಹೊಸ ಕಲೆಕ್ಷನ್ ಜತೆ ಗ್ರಾಹಕರಿಗೆ ಅವರಿಷ್ಟದಂತೆ ಒಪ್ಪುವ ಬಟ್ಟೆಗಳ ಭಂಡಾರವೇ ಇಲ್ಲಿದೆ.