ಮಂಗಳೂರು : ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರ ಅಧಿಕಾರ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಿಟ್ಟಿನಲ್ಲಿ ಬಿಜೆಪಿ ಪ್ರಮುಖರ ಸಭೆ ಮಂಗಳೂರಿನಲ್ಲಿ ಇಂದು ನಡೆಯಿತು.
ಪಕ್ಷದ ರಾಜ್ಯಾಧ್ಯಕ್ಷರ ಸೂಚನೆಯಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಪಕ್ಷದ ಕಚೇರಿಯಲ್ಲಿ ಪಕ್ಷ ಪ್ರಮುಖರ ಸಭೆ ಕರೆದಿದ್ದು, ಸಭೆಯಲ್ಲಿ ನಗರ ಮಂಡಲ ಅಧ್ಯಕ್ಷ, ಕಾರ್ಯದರ್ಶಿ ಸ್ಥಾನಕ್ಕೆ ಮತ್ತು ಗ್ರಾಮಾಂತರ ಮಂಡಲದ ಅಧ್ಯಕ್ಷ ಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಗಳ ಹೆಸರು ಸೂಚಿಸಲು ಪದಾಧಿಕಾರಿಗಳ ಬಳಿ ತಿಳಿಸಲಾಯಿತು ಈ ಸಂದರ್ಭ ಹಲವರು ಹಲವು ಹೆಸರುಗಳನ್ನು ಸೂಚಿಸಿದರು. ಈ ತಿಂಗಳ ಅಂತ್ಯದೊಳಗೆ ಹೆಸರು ಘೋಷಣೆ ಮಾಡುವ ಕುರಿತು ತಿಳಿಸಲಾಯಿತು.
ಗ್ರಾಮಾಂತರ ಮಂಡಲದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ರಾಜೀವ ಭಂಡಾರಿ ,ಪ್ರಸನ್ನ ಮಾರ್ತ ,ದಯಾನಂದ ಉಜಿರೆಮಾರ್ ಪುರುಷೋತ್ತಮ ಮುಂಗ್ಲಿಮನೆ, ಉಮೇಶ್ ಕೋಡಿಬೈಲ್ ಸಹಿತ ಹಲವರ ಹೆಸರು ಸೂಚಿಸಲಾಯಿತು
ನಗರ ಮಂಡಲದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಚಂದ್ರಶೇಖರ್ ರಾವ್ ಬಪ್ಪಳಿಗೆ, ಅನಿಲ್ ತೆಂಕಿಲ, ಅನ್ನಪೂರ್ಣೇಶ್ವರಿ, ಸಚಿನ್ ಶೆಣೈ, ವಸಂತ ಲಕ್ಷ್ಮಿ, ಗೌರಿ ಬನ್ನೂರು, ಯುವರಾಜ್ ಪೆರಿಯತ್ತೋಡಿ, ವಿಶ್ವನಾಥ ಗೌಡ, ಶಿವಕುಮಾರ್, ಸಂತೋಷ್ ಕೈಕಾರ, ದಯಾರಾಜ್ ತೆಂಕಿಲ, ಸ್ವಯಂಪ್ರಭ ರವರ ಹೆಸರನ್ನು ಸೂಚಿಸಲಾಯಿತು.
ಕಿಶೋರ್ ಬೊಟ್ಯಾಡಿ, ಪ್ರೇಮಾನಂದ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ರಾಜೇಶ್ ಕಾವೇರಿ, ಗೋಪಾಲಕೃಷ್ಣ ಹೇರಳೆ, ಯತೀಶ್ ಅರ್ವಾರ್, ಸುನಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.