ನಗರಸಭೆ ಮತದಾರರಲ್ಲದ ಚಿದಾನಂದ ರೈ ನಗರಸಭೆಗೆ ನಾಮನಿರ್ದೇಶನ  | ಬಿಜೆಪಿ ಸದಸ್ಯರಿಂದ ಜಿಲ್ಲಾಧಿಕಾರಿಗೆ ಆಕ್ಷೇಪಣಾ ಮನವಿ

ಪುತ್ತೂರು: ಗ್ರಾಮಾಂತರ ಬೂತ್ ಸಂಖ್ಯೆ135 ರಲ್ಲಿ ಕ್ರಮ.ಸಂಖ್ಯೆ 254 ರಲ್ಲಿ‌ಮತದಾನದ ಹಕ್ಕು ಇರುವ ಚಿದಾನಂದ ರೈವರನ್ನು ನಗರಸಭೆಗೆ ನಾಮನಿರ್ದೇಶನ ಮಾಡಿದ ಬಗ್ಗೆ ಬಿಜೆಪಿ‌ ಸದಸ್ಯರಿಂದ ಪೌರಾಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಆಕ್ಷೇಪ ಅರ್ಜಿ ಸಲ್ಲಿಸಲಾಗಿದೆ.

ಈಗಾಗಲೇ ನಗರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಡಳಿತ ಅವಧಿ ಮುಗಿದಿದ್ದು, ಎರಡನೇ ಅವಧಿಗೆ ಮೀಸಲಾತಿ ನಿಗದಿಯಾಗಿರುವುದರಿಂದ ಜಿಲ್ಲಾಧಿಕಾರಿಗಳು ಪುತ್ತೂರು ನಗರಸಭೆಗೆ ಆಡಳಿತಾಧಿಕಾರಿಯಾಗಿದ್ದಾರೆ. ಹೀಗಿದ್ದು ನಗರಸಭೆಗೆ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದು, ಈ ಪೈಕಿ ಚಿದಾನಂದ ರೈ ಗ್ರಾಮಾಂತರ ಮತದಾರರಾಗಿದ್ದು, ನಗರಸಭೆ ಮತದಾರರಲ್ಲ.

ಆದ್ದರಿಂದ ಅವರನ್ನು ನಗರಸಭೆಗೆ ನಾಮನಿರ್ದೇಶನ ಮಾಡಿರುವುದಕ್ಕೆ ನಮ್ಮ ಆಕ್ಷೇಪವಿದೆ. ತಕ್ಷಣ ಈ ಕುರಿತು ಗಮನಹರಿಸಬೇಕೆಂದು ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ್ ರಾವ್ ನಗರಸಭೆ ಬಿಜೆಪಿ ಸದಸ್ಯರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣಾ ಪತ್ರ ಸಲ್ಲಿಸಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top