ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಲ್ಲಿ ನಡೆದಿದೆ ಎನ್ನಲಾದ 2,000 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿ ಬಿಜೆಪಿಯು ರಾಜ್ಯ ಕಾಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
ಈ ಬಗ್ಗೆ ಟ್ವೀಟ್ ಮಾಡಿ, ಹಗರಣಗಳ ಸರಣಿ ಧಾರಾವಾಹಿಯೇ ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ವ್ಯಂಗ್ಯವಾಡಿದೆ.
ವಾಲ್ಮೀಕಿ ನಿಗಮದಲ್ಲಿ ಹಗರಣವಾಯ್ತು, ಮುಡಾದಲ್ಲಿ ಹಗರಣವಾಯ್ತು, ಈಗ ಅಪೆಕ್ಸ್ ಬ್ಯಾಂಕ್ ನ ಸರದಿ. ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರು ಅಪೆಕ್ಸ್ ಬ್ಯಾಂಕ್ ನಲ್ಲಿ 2000 ಕೋಟಿಗೂ ಹೆಚ್ಚು ಹಗರಣ ನಡೆಸಿದ್ದು, ಹೈಕೋರ್ಟ್ ಈ ಸಂಬಂಧ ತನಿಖೆಗೆ ಆದೇಶಿಸಿದೆ. ಸಿಎಂ ಸಿದ್ದರಾಮಯ್ಯ ಅವರಾದಿಯಾಗಿ ಕಾಂಗ್ರೆಸ್ನ ಬಹುಪಾಲು ಸಚಿವರು ಹಾಗೂ ಶಾಸಕರು ಪರಪ್ಪನ ಅಗ್ರಹಾರಕ್ಕೆ ತಾ ಮುಂದು ನಾ ಮುಂದು ಎಂಬ ರೇಸ್ ನಲ್ಲಿರುವುದು ಕರ್ನಾಟಕದ ದುರಂತ ಎಂದು ಬಿಜೆಪಿ ಕುಕ್ಕಿದೆ.