ಮಾರಕ ಡೆಂಗ್ಯು ಕಾಯಿಲೆಗೆ ಹಲವಾರು ಮಂದಿ ಬಲಿ | ಡೆಂಗ್ಯು ಹರದಡಂತೆ ಕ್ರಮ ಕೈಗೊಳ್ಳಲು ಬಿ.ಎಂ.ಭಟ್ ಆಗ್ರಹ

ಪುತ್ತೂರು: ಮಳೆಗಾಲದಲ್ಲಿ ಕೊಳಚೆ ಪ್ರದೇಶದ ಸ್ವಚ್ಚತೆ, ವೈರಸ್ ಉತ್ಪತ್ತಿ ಆಗುವ ಪ್ರದೇಶಗಳ ಗುರುತಿಸಿ ಕ್ರಿಮಿನಾಶಕ‌ ಸಿಂಪಡಿಸುವುದು ಸೇರಿದಂತೆ ಜನರ ಆರೋಗ್ಯ ರಕ್ಷಣೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಿಪಿಐಎಂ ಮುಖಂಡ ಬಿ.ಎಂ.ಭಟ್ ಆಗ್ರಹಿಸಿದ್ದಾರೆ.

ಯಾವುದೇ ರೋಗ ಹರಡದಂತೆ ರಕ್ಷಣೆ ಒದಗಿಸಬೇಕಾದ್ದು ಸರಕಾರ, ಆರೋಗ್ಯ ಇಲಾಖೆಯ ಕರ್ತವ್ಯವಾಗಿದೆ. ಆದರೆ ಆರೋಗ್ಯ ಇಲಾಖೆ ಏನು ಮಾಡುತ್ತಿದೆ. ಜನ ಡೆಂಗ್ಯು ಮೊದಲಾದ ಮಾರಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಜಿಲ್ಲೆಗೆ 8 ಜನ ಶಾಸಕರಿದ್ದರೂ ಜನರ ಆರೋಗ್ಯ ಬಗ್ಗೆ ಯಾವಯದೇ ಕಾಳಜಿ ಇಲ್ಲದವರಾಗಿದ್ದಾರೆ‌. ಲಾಭದಾಯಕ ದೃಷ್ಟಿಕೋನದ ಮನೋಭಾವ ಹೊಂದಿದ ಸರಕಾರ , ಜನಪ್ರತಿನಿದಿಗಳು ಇಂದು ಸೇವಾ ಮನೋಭಾವವನ್ನು ಕಳಚಿ ಕೊಂಡಿದ್ದಾರೆಯೇ ? ಜನರ ಆರೋಗ್ಯ ರಕ್ಷಣೆಯಲ್ಲೂ ಲಾಭದ ಲೆಕ್ಕಚಾರ ನೋಡುವುದು ಜನರ ಜೀವದ ಮೇಲೆ ಆಟ ಆಡಿದಂತೆ ಎಂದು ಆಕ್ರೋಶಿತರಾಗಿದ್ದಾರೆ.

ಈ ಬಗ್ಗೆ ಸರಕಾರ ತಕ್ಷಣ ಕಠಿಣ ಕ್ರಮ‌ ಕೈಗೊಂಡು ಔಷದಿ ಸಿಂಪಡಿಕೆಯೂ ಸೇರಿದಂತೆ ರೋಗ ಉತ್ಪತ್ತಿ ಮತ್ತು ಹರಡುವಿಕೆಯನ್ನು ತಡೆಯಲು ಮುಂದಾಗದಿದ್ದರೆ ನಾವು ಜಿಲ್ಲಾ ಆರೋಗ್ಯ ಇಲಾಖೆಯ ಎದುರು ಸಮರ ಹೋರಾಟ ನಡೆಸಬೇಕಾಗುತ್ತದೆ ಎಂದವರು ಆರೋಗ್ಯ ಇಲಾಖೆಯನ್ನು ಎಚ್ಚರಿಸಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top