ಮಂಗಳೂರು: ಆಸೀಫ್ ಆಪತ್ಭಾಂಧವನ ಕರಾಳ ಮುಖ ಬಯಲಾಗಿದೆ. ನಶೆಯಲ್ಲಿ ಹೆಂಡತಿಗೆ ಚಿತ್ರಹಿಂಸೆ, ಮನೆಯಲ್ಲಿ ರಂಪಾಟ ಮಾಡುವುದು ಜೊತೆಗೆ ತನ್ನ ಸ್ವಂತ ಮಗಳದ್ದೇ ಖಾಸಗಿ ವಿಡಿಯೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವಿಕೃತಿ ಮೇರೆದಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಿವಿಧ ವಾಟ್ಸಾಪ್ ಗುಂಪುಗಳಲ್ಲಿ ತನ್ನ ಮಗಳ ಖಾಸಗಿ ವೀಡಿಯೋಗಳನ್ನು ಹರಿಬಿಟ್ಟ ಆರೋಪದಲ್ಲಿ ತಂದೆ ಆಸೀಫ್ ವಿರುದ್ಧ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ಆರೋಪಿಯ ಪುತ್ರಿಯು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂಚಿನಡ್ಕದ ನಿವಾಸಿ ಆರೋಪಿ ಆಸೀಫ್ನ ಮಗಳು ಹಾಗೂ ತೀರ್ಥ ಹಳ್ಳಿಯ ಅವರ ಸಂಬಂಧಿ ತೌಸೀಫ್ ಪ್ರೀತಿಸುತ್ತಿದ್ದು, ಇದು ಆಸೀಫ್ ಗೆ ಇಷ್ಟವಿರಲಿಲ್ಲ. ಆರೋಪಿಯು ತೌಸೀಫ್ನನ್ನು ಮನೆಗೆ ಕರೆಸಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಮಗಳ ಫೋನ್ ಕಸಿದುಕೊಂಡು ಅದರಲ್ಲಿದ್ದ ವೀಡಿಯೋಗಳನ್ನು ತನ್ನ ಫೋನ್ಗೆ ವರ್ಗಾಯಿಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿವಿಧ ವಾಟ್ಸಾಪ್ ಗುಂಪುಗಳಿಗೆ ರವಾನಿಸಿದ್ದಾನೆ.
ಇದಕ್ಕೆ ಪತ್ನಿ ಆಕ್ಷೇಪಿಸಿದ್ದು, ಆಕೆಗೆ ಮತ್ತು ಪುತ್ರಿಗೆ ಹಲ್ಲೆಯನ್ನೂ ಮಾಡಿದ್ದಾನೆ. ಈ ಕುರಿತಾಗಿ ಪತ್ನಿಯು ಉಡುಪಿ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಪತ್ನಿಯು ಉಚ್ಚಿಲದ ತನ್ನ ತಾಯಿ ಮನೆಯಲ್ಲಿದ್ದಾಗ ಅಲ್ಲಿಗೂ ಹೋಗಿ ಗಲಾಟೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಪತ್ಭಾಂದವ ಆಸಿಫ್ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ‘ ಆಪತ್ಭಾಂಧವ ಆಸಿಫ್’ ಎಂದೇ ಗುರುತಿಸಿಕೊಂಡು ವಿಭಿನ್ನ ಪ್ರತಿಭಟನೆಗಳ ಮೂಲಕ ಜನಮನ್ನಣೆ ಜೊತೆ ವಿವಾದಗಳನ್ನು ಸೃಷ್ಟಿಸಿಕೊಂಡಿದ್ದ. ಸದ್ಯ ಆಸೀಫ್ ನ ಕರಾಳ ಮುಖ ಬಯಲಾಗಿದೆ. ಈತ ಡ್ರಗ್ಸ್ ಸೇವನೆ ಮಾಡುತ್ತಾನೆ, ನಶೆಯಲ್ಲಿ ಮನೆಗೆ ಬಂದು ಹೆಂಡತಿಗೆ ಮನಸೋಇಚ್ಛೆ ಥಳಿಸುತ್ತಾನೆ ಹಾಗೂ ಇನ್ನೂ ಹಲವು ವಿಚಾರಗಳ ಬಗ್ಗೆ ಆತನ ಹೆಂಡತಿ ದೂರು ನೀಡಿದ್ದಾರೆ. ಈತನ ವಿಕೃತಿ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.