ಬೆಳ್ತಂಗಡಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ವ್ಯಕ್ತಿಯೊಬ್ಬರಿಂದ ವಂಚಕರು ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.
ಬೆಳ್ತಂಗಡಿ ವ್ಯಕ್ತಿಯೊಬ್ಬರು ಇನ್ ಸ್ಟಾಗ್ರಾಮ್ ನಲ್ಲಿ ಬಂದ ಲಿಂಕ್ ಮೂಲಕ ವಾಟ್ಸಪ್ ಗ್ರೂಪಿಗೆ ಸೇರಿದ ವ್ಯಕ್ತಿಗೆ ಅಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಬಳಿಕ ಅವರು ಕಳುಹಿಸಿದ ಲಿಂಕ್ ಮುಖಾಂತರ ಎ.ಸಿ ಮಾಕ್ಸ್, JOHCM ಎಂಬ ಎರಡು ಆಪ್ ಗಳನ್ನು ಡೌನ್ ಲೋಡ್ ಮಾಡಿದ್ದಾರೆ ಬಳಿಕ ಈ ಆಪ್ ಗಳ ಮೂಲಕ ದೂರುದಾರರ ಖಾತೆಯಿಂದ ಅವರು ಹೇಳಿದ ವಿವಿಧ ಖಾತೆಗಳಿಗೆ 3,30,000ಹಣ ವರ್ಗಾಯಿಸಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ಅವರು ಸಂಪರ್ಕಕ್ಕೆ ಸಿಗದಿದ್ದಾಗ ಮೋಸ ಹೋಗಿರುವುದು ತಿಳಿದು ಬಂದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಮಂಗಳೂರು ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.