ಪುತ್ತೂರು: ನಗರದ ಸಾಮೆತ್ತಡ್ಕ ಶಾಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಮಕ್ಕಳಿಗೆ ಅರಿವು ಕಾರ್ಯಕ್ರಮ ‘ನಾವು ಮನುಜರು’ ಹಾಗೂ ‘ಉಪಲಾಷಿತ ಯೋಜನೆ’ ಯ ಅನುಷ್ಠಾನ ಕಾರ್ಯಕ್ರಮ ಇಂದು ನಡೆಯಿತು.
ಇಲಾಖೆಯ ನಿರ್ದೇಶನದಂತೆ ‘ನಮ್ಮ ಶಾಲೆ’ ಸ. ಹಿ. ಪ್ರಾ. ಶಾಲೆ ಸಾಮೆತ್ತಡ್ಕದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು. ಪುತ್ತೂರು ನಗರ ಠಾಣಾ ಉಪನಿರೀಕ್ಷಕ ಆಂಜನೇಯ ರೆಡ್ಡಿ ಕಾರ್ಯಕ್ರಮವನ್ನು ನಡೆಸಿಕೊಟ್ಟು ಪೋಕ್ಸೋ ಕಾಯ್ದೆಯ ಕುರಿತು ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕಿ ಮರಿಯಾ ಅಶ್ರಫ್ ಉಪಸ್ಥಿತರಿದ್ದರು.
























