ಕಾವು : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ತಾಲೂಕಿನ ಕಾವು ಸಮೀಪದ ಮದ್ಲ ಎಂಬಲ್ಲಿ ತಡೆಗೋಡೆಯಿಲ್ಲದ ಪೊದೆಗಳಿಂದ ತುಂಬಿದ ತೋಡು. ಈ ತೋಡಿಗೆ ಸೇತುವೆಯೂ ಇದ್ದು, ಡಾಮಾರು ರಸ್ತೆಯ ಸಮೀಪದಲ್ಲೇ ಇರುವುದರಿಂದ ಮತ್ತು ಯಾವುದೇ ತಡೆಗೋಡೆ ಇಲ್ಲದಿರುವುದು ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟಬುತ್ತಿ.
ಇತ್ತೀಚೆಗೆ ಒಂದು ತಾಯಿ ಮತ್ತು ಮಗು ಇದೇ ಸೇತುವೆಯ ಬಳಿ ದೊಡ್ಡ ವಾಹನವೊಂದನ್ನು ತಪ್ಪಿಸಲು ಹೋಗಿ ಅದೃಷ್ಟವಶಾತ್ ಕೂದಲೆಲೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಇನ್ಯಾವುದೇ ಅಪಘಾತ ಸಂಭವಿಸುವ ಮೊದಲೇ ಸಂಬಂಧಿಸಿದ ಇಲಾಖೆ ಈ ಸೇತುವೆಗೆ ತಡೆಗೋಡೆ ನಿರ್ಮಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.