ಗಗನಕ್ಕೇರಿದ ತರಕಾರಿ ಬೆಲೆ

ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಟೊಮೆಟೊ ಸೇರಿದಂತೆ ತರಕಾರಿ ದರಗಳು ಹೆಚ್ಚಳವಾಗುತ್ತಿದ್ದು, ಬೆಲೆ ಕೇಳಿಸಿಕೊಳ್ಳುವ ಗ್ರಾಹಕ ತಮ್ಮಹಣಕಾಸಿನ ಸ್ಥಿತಿಯನ್ನು ಎರಡು ಬಾರಿ ಯೋಚನೆ ಮಾಡಿ ತರಕಾರಿಗಳನ್ನು ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಕಳೆದ ವಾರ ಕೆಜಿಗೆ 50 ರೂ.ಗೆ ದೊರೆಯುತ್ತಿದ್ದ ಟೊಮೆಟೊ, ಈಗ ಏಕಾಏಕಿ 100 ರೂ. ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಬೀನ್ಸ್ ಕೆಜಿಗೆ 229 ರೂ. ಗೆ ಏರಿಕೆಯಾಗಿದ್ದರೆ ಉಳಿದಂತೆ ಶುಂಠಿ 198 ರೂ., ಬೆಳ್ಳುಳ್ಳಿ 338 ರೂ., ನಾಟಿ ಕೊತ್ತಂಬರಿ 250 ರೂ., ಏಲಕ್ಕಿ ಬಾಳೆ 86 ರೂ., ಬಿಳಿ ಬದನೆ 100 ರೂ., ಬಜ್ಜಿ ಮೆಣಸಿನಕಾಯಿ 114 ರೂ., ಕ್ಯಾಪ್ಸಿಕಾಂ 114 ರೂ., ಮೂಲಂಗಿ 70 ರೂ., ನುಗ್ಗೆಕಾಯಿ 184 ರೂ., ಹೀರೇಕಾಯಿ 100 ರೂ., ಕ್ಯಾರಟ್ 92 ರೂ., ನವಿಲುಕೋಸು 98 ರೂ., ಟೊಮೇಟೊ 100 ರೂ. ಗಡಿ ದಾಟಿದೆ.







































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top