ಹಜ್ ಯಾತ್ರೆಗೆ ಹೋಗಿದ್ದ ವಿವಿಧ ದೇಶಗಳ 550 ಯಾತ್ರಾರ್ಥಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಉಷ್ಣಾಂಶ ಏರಿಕೆಯಿಂದ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.
ಮೆಕ್ಕಾದ ರಸ್ತೆ ಬೀದಿಯಲ್ಲಿ ಯಾತ್ರಾರ್ಥಿಗಳು ಅಸ್ವಸ್ಥರಾಗಿ ಮಲಗಿದ್ದಾರೆ. ಯಾತ್ರೆಯಲ್ಲಿ ಉಸಿರು ಬಿಟ್ಟ ಯಾತ್ರಾರ್ಥಿಗಳ ಶವಗಳನ್ನು ವಿಲೇವಾರಿ ಮಾಡಿಲ್ಲ ಅನ್ನೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮೆಕ್ಕಾದಲ್ಲಿ ಕಳೆದ ವರ್ಷ 240 ಮಂದಿ ಸಾವನ್ನಪ್ಪಿದ್ದರು. ಈ ಬಾರಿ ಈಜಿಪ್ಟ್ ದೇಶದ 323 ಮಂದಿ, ಜೋರ್ಡಾನ್ ದೇಶದ 60 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೆಕ್ಕಾದಲ್ಲಿ ವರ್ಷದಿಂದ ವರ್ಷಕ್ಕೆ ಉಷ್ಣಾಂಶ ಏರಿಕೆಯಾಗುತ್ತಿದೆ. ಈ ಬಾರಿ ಉಷ್ಣಾಂಶ 51.8 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ. ಈ ಉಷ್ಣಾಂಶ ಏರಿಕೆಯಿಂದ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಮೆಕ್ಕಾದ ಉಷ್ಣ ಗಾಳಿ ಹಾಗೂ ಹೀಟ್ ಸ್ಟ್ರೋಕ್ ನಿಂದ 240 ಮಂದಿ ಸಾವನ್ನಪ್ಪಿದ್ದರು. ಈ ವರ್ಷ ಯಾತ್ರಾರ್ಥಿಗಳ ಸಾವಿನ ಸಂಖ್ಯೆ 550ಕ್ಕೆ ಏರಿಕೆಯಾಗಿದೆ. ಹೀಟ್ ಸ್ಟ್ರೋಕ್ ನಿಂದ ಅಸ್ವಸ್ಥಗೊಂಡಿರುವ 2 ಸಾವಿರ ಮಂದಿಗೆ ಸೌದಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.