ಉಪ್ಪಿನಂಗಡಿ: ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಎಂಬುವವರು ರವಿವಾರ ತಡ ರಾತ್ರಿ ಕೊಲೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿ ಹತ್ತನೇ ತರಗತಿಯ ಬಾಲಕನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಬಾಲಕ ಹೇಮಾವತಿ ಅವರ ಮನೆಯ ತಂಗಿದ್ದು, ಈತ ಅವರ ಅಕ್ಕನ ಮಗನಾಗಿದ್ದು, ಹತ್ತನೇ ತರಗತಿ ವಿದ್ಯಾರ್ಥಿ. ಬಾಲಕ ಹೇಮಾವತಿ ಅವರು ಮಲಗಿದ್ದಲ್ಲಿ ಹೋಗಿ ದೇಹ ಸುಖ ಬಯಸಿದ್ದಾನೆ. ಇದಕ್ಕೆ ಹೇಮಾವತಿ ಪ್ರತಿರೋದ ಮಾಡಿದ್ದು, ಈ ವೇಳೆ ಆರೋಪಿ ಬಾಲಕ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಹೇಳಿದ್ದಾನೆ ಎಂದು ವರದಿಯಾಗಿತ್ತು.
ಮೃತ ಹೇಮಾವತಿ ಅವರು ಪತಿ ವಿಠಲ ಪೈ ಅವರು ನೀಡಿದ ದೂರಿನಲ್ಲಿ ” ನನ್ನ ಪತ್ನಿ ಹೇಮಾವತಿ ಆಗ ತಾಯಿ ಮನೆಯಲ್ಲಿ ಇದ್ದು, ಮಲಗಿದ್ದಲ್ಲೇ ಮೃತ ಹೊಂದಿದ್ದಾಳೆ. ಬಿಳಿಯೂರು ಗ್ರಾಮದ ದರ್ಖಾಸು ಎಂಬಲ್ಲಿ ಹೋಗಿ ನಾನು ನೋಡಿದಾಗ, ಪತ್ನಿಯ ದೇಹದಲ್ಲಿ ಗಾಯದ ಗುರುತು ಕಂಡು ಬಂದಿದೆ. ಸಾಂದರ್ಭಿಕವಾಗಿ ಜೂ.16 ರಂದು ರಾತ್ರಿ ಪತ್ನಿಯ ಅಕ್ಕನ ಮಗ ಕೂಡಾ ಮನೆಗೆ ಬಂದಿದ್ದು, ಸಂಶಯದ ಆಧಾರದಲ್ಲಿ ದೂರು ನೀಡಲಾಗಿದೆ. ಅಂದು ರಾತ್ರಿ ಪತ್ನಿಯ ತಾಯಿ, ಪತ್ನಿಯ ಅಕ್ಕನ ಮಗ ಮತ್ತು ಪತ್ನಿ ಊಟ ಮಾಡಿ ಮಲಗಿದ್ದರು ಎಂದು ಹೇಳಲಾಗಿದೆ. ನಂತರ 17 ರ ಬೆಳಗ್ಗಿನ ಜಾವದ ಮಧ್ಯದ ಅವಧಿಯಲ್ಲಿ ಪತ್ನಿಯ ಕುತ್ತಿಗೆಯನ್ನು ಅದುಮಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಮೃತರ ಪತಿ ದೂರಿನಲ್ಲಿ ತಿಳಿಸಿದ್ದಾರೆ.