ಬೆಳ್ಳಾರೆ ಮಹಿಳೆ ಕೊಲೆ ಆರೋಪಿ ಬಂಧನ

ಬೆಳ್ಳಾರೆ: ಬೆಳ್ಳಾರೆಯ ಎಪಿಎಂಸಿ ಸಂತೆ ಮಾರುಕಟ್ಟೆಯಲ್ಲಿ ನಡೆದ ಮಹಿಳೆಯ ಕೊಲೆಗೆ ಸಂಬಂಧಿಸಿ ಕೊಲೆ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

ಕಲ್ಮಡ್ಕದ ಜೋಗಿಯಡ್ಕದ ವೆಂಕಪ್ಪ ಎಂಬವರ ಪುತ್ರ ಜಯರಾಮ ನಾಯ್ಕ ಕೊಲೆ ಆರೋಪಿಯಾಗಿದ್ದು, ಆತನನ್ನು ಬಂಧಿಸಲಾಗಿದೆ.

ಬೆಳ್ಳಾರೆ ಗ್ರಾಮದ ಪಾಟಾಜೆಯ ನಳಿನಿ (55) ಅವರನ್ನು ಭಾನುವಾರ ರಾತ್ರಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2 ವರ್ಷಗಳ ಹಿಂದೆ ಮನೆ ಬಿಟ್ಟಿದ್ದ ನಳಿನಿ ವಾರಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದು, ಬಸ್ ತಂಗುದಾಣ, ಅಂಗಡಿಗಳ ಎದುರು ರಾತ್ರಿ ಕಳೆಯುತ್ತಿದ್ದರು. ಜಯರಾಮ ನಾಯ್ಕನೂ ಮದ್ಯ ವ್ಯಸನಿಯಾಗಿದ್ದು, ಕೂಡ ಮನೆ ಬಿಟ್ಟಿದ್ದು, ಬಸ್‌ ತಂಗುದಾಣ, ಮಾರುಕಟ್ಟೆಯಲ್ಲಿ ರಾತ್ರಿ ತಂಗುತ್ತಿದ್ದ. ರವಿವಾರ ರಾತ್ರಿ ನಳಿನಿ ಮತ್ತು ಜಯರಾಮ ಎಪಿಎಂಸಿ ಮಾರುಕಟ್ಟೆಯಲ್ಲಿ ತಂಗಿದ್ದರು. ಮಧ್ಯರಾತ್ರಿ ಎದ್ದು ಹೊರಗಡೆ ತೆರಳಿದಾಗ ನಳಿನಿ ಅವರ ಕಾಲಿಗೆ ಕಾಲು ತಾಗಿತೆಂಬ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತೆನ್ನಲಾಗಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top