ಪುತ್ತೂರು: ವಿಶ್ವಕರ್ಮ ಕೂಡೂವಳಿಕೆ ಕಾವು ವಲಯ ಇದರ ಮುಂದಿನ ಅವಧಿಯ ರಚನಾತ್ಮಕ ಚಟುವಟಿಕೆಗಳು ಮತ್ತು ಸಂಘಟನಾ ದೃಷ್ಟಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ ಮೊಕ್ತೇಸರ ನಾರಾಯಣ ಆಚಾರ್ಯರ ಉಪಸ್ಥಿತಿಯಲ್ಲಿ ನಡೆಯಿತು.
ಕೂಡೂವಳಿಕೆಯ ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀನಿವಾಸ ಆಚಾರ್ಯ, ಕಾರ್ಯದರ್ಶಿಯಾಗಿ ಬಾಲಕೃಷ್ಣ ಆಚಾರ್ಯ ಮಳಿ, ಜೊತೆಕಾರ್ಯದರ್ಶಿಯಾಗಿ ರವೀಂದ್ರ ಆಚಾರ್ಯ ಅರಿಯಡ್ಕ, ಖಜಾಂಚಿಯಾಗಿ ಜಯಕರ ಆಚಾರ್ಯ ಕುಂಬ್ರ ಸರ್ವಾನುಮತದಿಂದ ಆಯ್ಕೆಯಾದರು.
ಕೂಡೂವಳಿಕೆಯ ವೆಂಕಟ್ರಮಣ ಆಚಾರ್ಯ ಪೆರ್ಲಂಪಾಡಿ ಸೇರಿದಂತೆ ಎಲ್ಲಾ ಹಿರಿಯ-ಕಿರಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.