ಜನವರಿ ತಿಂಗಳ ಸೇವಾ ಯೋಜನೆ

ಪುತ್ತೂರು : ಸಹಾಯಹಸ್ತ ಲೋಕಸೇವಾ ಟ್ರಸ್ಟ್ ದ. ಕ ಕರ್ನಾಟಕ ನೊಂದವರ ಬಾಳಿಗೆ ಆಸರೆ ವತಿಯಿಂದ ಜನವರಿ ತಿಂಗಳ ಸೇವಾಯೋಜನೆ ಭಾನುವಾರ ನಡೆಯಿತು.ಟ್ರಸ್ಟಿನ ಸಲಹೆಗಾರ ಉದಯ ಮಧೂರು ಮಾತನಾಡಿ, ಟ್ರಸ್ಟ್ ಉತ್ತಮ ರೀತಿಯಲ್ಲಿ ಸೇವಾಯೋಜನೆ ನಡೆಸುತ್ತಿದ್ದು ಮುಂದಕ್ಕೂ ಧಾನಿಗಳ ಸಹಕಾರ ಕೋರಿದರು.ಕಾರ್ಯದರ್ಶಿ ಮನೋಹರ್ ಪಲಯಮಜಲು ಮಾತನಾಡಿ,  ಜನವರಿ ತಿಂಗಳಲ್ಲಿ ಟ್ರಸ್ಟಿನ ವತಿಯಿಂದ 1 ಲಕ್ಷದ 16 ಸಾವಿರದ ಸೇವಾಯೋಜನೆ ನಡೆಸಲು ಸಹಕಾರ ನೀಡಿದ ದಾನಿಗಳಿಗೂ ತಂಡದ ಸೇವಾ ಮಾಣಿಕ್ಯರಿಗೂ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪುತ್ತೂರಿನ ಉದ್ಯಮಿ ಸತೀಶ್ ಶುಭ ಹಾರೈಸಿದರು. ಟ್ರಸ್ಟ್ ಅಧ್ಯಕ್ಷ ಡಿ. ಎಸ್. ಒಡ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 7 ಮಂದಿ ಫಲಾನುಭವಿಗಳಿಗೆ ಸಹಾಯಧನದ ಚೆಕ್ ಹಸ್ತಾಂತರ ಹಾಗೂ ಆಯ್ದ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿ ವಿತರಣೆ ನಡೆಯಿತು. ಟ್ರಸ್ಟಿನ ಪದಾಧಿಕಾರಿಗಳು ಹಾಗೂ ಸೇವಾಮಾಣಿಕ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top