ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಅನ್ಯ ಕೋಮಿನ ತಂಡದಿಂದ ಹಲ್ಲೆ

ಮಂಗಳೂರು : ವಿಜಯೋತ್ಸವದಲ್ಲಿ ಭಾಗವಹಿಸಿದ್ದ  ಇಬ್ಬರು ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಮುಸ್ಲಿಂ ಯುವಕರ ತಂಡವೊಂದು ಚೂರಿಯಿಂದ ಇರಿದ ಘಟನೆ ಕೊಣಾಜೆ ಠಾಣೆ ವ್ಯಾಪ್ತಿಯ ಬೋಳಿಯಾರು ಸಮೀಪ ಭಾನುವಾರ ರಾತ್ರಿ ನಡೆದಿದೆ.

ಇನೋಳಿ ಧರ್ಮನಗರದ ಹರೀಶ್ ಹಾಗೂ ನಂದನ್ ಕುಮಾರ್ ಚೂರಿ ಇರಿತದಿಂದ ಗಾಯಗೊಂಡವರು ಎನ್ನಲಾಗಿದೆ.

ಗಾಯಾಳುಗಳನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.







































 
 

ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಮತ್ತು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರ ವಿಜಯೋತ್ಸವದ ಅಂಗವಾಗಿ ಬೋಳಿಯಾರು ಬಿಜೆಪಿ ಗ್ರಾಮಸಮಿತಿ ವತಿಯಿಂದ ಚೇಳೂರು, ಬೋಳಿಯಾರು ಮಾರ್ಗವಾಗಿ ಧರ್ಮನಗರದವರೆಗೆ ವಿಜಯೋತ್ಸವ ಮೆರವಣಿಗೆ ಆಯೋಜಿಸಲಾಗಿತ್ತು. ರ್ಯಾಲಿ ಮುಗಿಸಿ ಮನೆಗೆ ತೆರಳಿದ್ದ ಹರೀಶ ಮತ್ತು ನಂದನ್ ಅಂಗಡಿಯಿಂದ ಯಾವುದೋ ಸಾಮಾಗ್ರಿ ಖರೀದಿಸಿ ತರಲೆಂದು ಬೋಳಿಯಾರು ಕ್ರಾಸ್ ನತ್ತ ಮರಳಿ ಬಂದಿದ್ದರು. ಮನೆಗೆ ಮರಳುವಾಗ ಅವರು ಕೇಸರಿ ಶಾಲು ಧರಿಸಿದ್ದನ್ನು ನೋಡಿದ ಮುಸ್ಲಿಂ ಯುವಕರ ತಂಡವೊಂದು ತಡೆದು ಬೆದರಿಸಿದ್ದಲ್ಲದೆ ಬೈಕಿನ ಮುಂದೆ ಹರೀಶ್ ಅವರ ಹೊಟ್ಟೆಗೆ ಮತ್ತು ನಂದನ್ ಅವರ ಬೆನ್ನಿಗೆ ಚೂರಿಯಿಂದ ಇರಿದರು. ಬಳಿಕ ಕೃತ್ಯ ಎಸಗಿದ ತಂಡ ಪರಾರಿಯಾಗಿದೆ ಎನ್ನಲಾಗಿದೆ.

ಕೊಣಾಜೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top