ಪ್ರಕೃತಿಯ ವೈಪರೀತ್ಯಗಳಿಗೆ ಮನುಷ್ಯನೇ ಕಾರಣ | ವಿಶ್ವ ಪರಿಸರ ದಿನಾಚರಣೆಯಲ್ಲಿ ಲತಾ ಜಿ. ಭಟ್

ಪುತ್ತೂರು: ಪ್ರಕೃತಿಯ ವೈಪರೀತ್ಯಗಳಿಗೆ ಮನುಷ್ಯನೇ ಕಾರಣ. ಆದ್ದರಿಂದ ಪ್ರಕೃತಿಯ ಸಂರಕ್ಷಣಾ ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳಬೇಕು. ಕೇವಲ ನಮ್ಮ ಪ್ರಾಂತ್ಯವಲ್ಲದೇ ಇಡೀ ಪ್ರಪಂಚದಲ್ಲಿ ಪರಿಸರ ರಕ್ಷಣೆಯಾಗಬೇಕು ಎಂದು ಅರಣ್ಯ ಸಂರಕ್ಷಣಾ ಅಧಿಕಾರಿ ಲತಾ ಜಿ. ಭಟ್ ಹೇಳಿದರು.

ಅವರು ನಗರದ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ,  ಮನುಷ್ಯ ತನ್ನ ಸ್ವಾರ್ಥದಿಂದ ಪ್ರಕೃತಿಯನ್ನು ದುರುಪಯೋಗಗೊಳಿಸುತ್ತಿದ್ದಾನೆ. ಆದ್ದರಿಂದ ಇಂದಿನ ಪೀಳಿಗೆಯಾದ ನಾವು ಅದನ್ನು ವಿರೋಧಿಸಬೇಕು. ಒಂದು ಮರ ಕಡಿದರೆ ನಾಲ್ಕು ಸಸಿಯನ್ನು ನೆಟ್ಟು ಪರಿಸರದ ರಕ್ಷಣೆಯನ್ನು ಮಾಡಬೇಕು ಎಂದು ತಿಳಿಸಿದರು.







































 
 

ವೇದಿಕೆಯಲ್ಲಿ ಅರಣ್ಯ ಇಲಾಖೆಯ ಆರ್. ಎಫ್. ಒ ಕಿರಣ ಬಿ.ಎಂ ಉಪಸ್ಥಿತರಿದ್ದರು. ಕಿರಣ್ ಬಿ.ಎಂ ಅವರು ಸಾಂಕೇತಿಕವಾಗಿ ಗಿಡನೆಟ್ಟು ಲತಾ ಜಿ ಭಟ್ ನೀರುಣಿಸುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಶಾಲಾ ಪ್ರಾಂಶುಪಾಲೆ ಮಾಲತಿ ಡಿ, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.  ಸಾನ್ವಿ ಸ್ವಾಗತಿಸಿ, ಅಕ್ಷಜ್ ರೈ  ವಂದಿಸಿದರು,  ಅದಿತಿ ಯು.ಎನ್. ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top