ಪುತ್ತೂರು: ಮೈತ್ರಿಕೂಟದ ಸಂಖ್ಯೆ ಬುಧವಾರ 303 ಕ್ಕೆ ಏರಿಕೆಯಾಗಿದ್ದು, ಈ ಹಿನ್ನಲೆಯಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಹಳೆಯ ಸರಕಾರ ವಿಸರ್ಜನೆ ಮಾಡಿ ರಾಷ್ಟ್ರಪತಿಗಳ ಮನವಿಗೆ ಹೊಸ ಸರಕಾರ ರಚನೆ ಆಗುವವರೆಗೆ ಹಂಗಾಮಿ ಪ್ರಧಾನಿಯಾಗಿ ಮೋದಿ ಮುಂದುವರಿಯಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಒಟ್ಟು 293 ಸ್ಥಾನಗಳನ್ನು ಹೊಂದಿತ್ತು. ಆದರೆ ಈಗ ಮೈತ್ರಿಕೂಟದ ಸಂಖ್ಯೆ ಎರಡೇ ದಿನದಲ್ಲಿ 303ಕ್ಕೆ ಏರಿಕೆಯಾಗಿದೆ.
ಎನ್.ಡಿ.ಎ ಸಭೆ ನಡೆಸಿ ನಾಯಕರ ಸರ್ವಾನುಮತದ ಮೂಲಕ ಎನ್.ಡಿ.ಎ ನಾಯಕನಾಗಿ ಮೋದಿಯವರನ್ನು ಮತ್ತೊಮ್ಮೆ ಆಯ್ಕೆ ಮಾಡಲಾಗಿದೆ. ಇದರ ಜತೆಗೆ ಶನಿವಾರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗಿದೆ.
ಈ ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿದೇಶಿ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಈಗಾಗಲೇ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಶ್ರೀಲಂಕಾದ ಪ್ರಧಾನಿ ನಿಲ್ ವಿಕ್ರಮಸಿಂಘ ಭಾಗವಹಿಸುವುದಾಗಿ ಫೋನ್ ಕರೆ ಮೂಲಕ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್, ಭೂತಾನ್ ಪ್ರಧಾನಿ ಕೌಂಟರ್ ಟೈರಿಂಗ್ ಟೋಲ್ಲೇ, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಲ್ನಾಥ್ ಅವರಿಗೂ ಆಹ್ವಾನ ನೀಡಲಾಗಿದೆ. 7 ಮಂದಿ ಪಕ್ಷೇತರ ಸಂಸದರು, ಉಳಿದ ಸ್ಥಳೀಯ ಸಣ್ಣ ಪಕ್ಷದ ಮೂವರು ಸಂಸದರು ಎನ್.ಡಿ.ಎ ಸರಕಾರವನ್ನು ಬೆಂಬಲಿಸಿದ್ದಾರೆ ಎಂದು ವರದಿ ತಿಳಿಸಿದೆ.
























