9/11 ಸಮಸ್ಯೆಗೆ ಮುಕ್ತಿ ನೀಡಿದ ಶಾಸಕ ಅಶೋಕ್ ರೈ | ಹತ್ತು ದಿನದೊಳಗೆ ಗ್ರಾಪಂ ನಲ್ಲೇ 9/11 ವ್ಯವಸ್ಥೆ

ಪುತ್ತೂರು: 9/11 ಸಮಸ್ಯೆಗೆ ಕೊನೆಗೂ ಮುಕ್ತಿ ದೊರಕಿದೆ, ಈ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರುವ ಮೂಲಕ ಶಾಸಕ ಅಶೋಕ್ ರೈ ಯವರು ಜನ ಸಾಮಾನ್ಯರ ದ್ವನಿಯಾಗಿದ್ದಾರೆ.

ಕಳೆದ ಎರಡು ತಿಂಗಳಿಂದ 9/11 ಸಮಸ್ಯೆ ಸೃಷ್ಟಿಯಾಗಿದೆ. ಈ ಹಿಂದೆ ಗ್ರಾಪಂ ಮೂಲಕವೇ 9/11 ನೀಡಲಾಗುತ್ತಿತ್ತು. ಮನೆ ಕಟ್ಟುವವರು, ಸೈಟ್ ಗೆ ಲೋನ್ ಪಡೆಯುವಲ್ಲಿ 9/11 ಮಾಡಬೇಕಾಗಿದ್ದು  ಕಡ್ಡಾಯವಾಗಿದೆ. ಗ್ರಾಪಂ ಮೂಲಕ ನಡೆಯುತ್ತಿದ್ದ ಈ ವ್ಯವಸ್ಥೆಯನ್ನು ಕಳೆದ ಎರಡು ತಿಂಗಳ ಹಿಂದೆ ಹೈಕೋರ್ಟು ಆದೇಶದಂತೆ ಬದಲಾವಣೆ ಮಾಡಿದ್ದು 9/11 ಪಡೆಯಬೇಕಾದರೆ ಮುಡಾ ಮೂಲಕವೇ ಪಡೆಯಬೇಕಿತ್ತು. ಇದು ಜನ ಸಾಮಾನ್ಯರಿಗೆ ತೊಂದರೆಯುಂಟು ಮಾಡಿತ್ತು. ಗ್ರಾಮದ ವ್ಯಕ್ತಿಯೋರ್ವರಿಗೆ ಮನೆ ಮಟ್ಟಲು ತಮ್ಮ ಜಾಗಕ್ಕೆ 9/11 ಮಾಡಿಸಿಕೊಳ್ಳಬೇಕಾದರೆ ಮಂಗಳೂರು ಮುಡಾ ಕಚೇರಿಗೆ ಅರ್ಜಿ ಹಾಕಬೇಕಾಗಿತ್ತು‌. ಈ ಸಮಸ್ಯೆಯ ಬಗ್ಗೆ ಸಾರ್ವಜನಿಕರು ಶಾಸಕ ಅಶೋಕ್ ರೈ ಗಮನಕ್ಕೆ ತಂದಿದ್ದರು. ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದ ಶಾಸಕರು 9/11 ವ್ಯವಸ್ಥೆಯನ್ನು ಹಿಂದೆ ಇದ್ದ ರೀತಿಯಲ್ಲೇ ಮುಂದುವರೆಸಬೇಕು, ಗ್ರಾಪಂ ಮೂಲಕವೇ ಇದರ ವ್ಯವಸ್ಥೆ ಆಗಬೇಕಿದೆ. ಈಗಿನ ವ್ಯವಸ್ಥೆಯು ಜನರಿಗೆ ತೊಂದರೆಯುಂಟು ಮಾಡಿದ್ದು ಬಡವರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ ಎಂದು ಸರಕಾರಕ್ಕೆ ತಿಳಿಸಿದ್ದರು.

ಈ ವಿಚಾರವಾಗಿ ಶಾಸಕರಿಗೆ ಮಾಹಿತಿ ನೀಡಿದ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆಯವರು ಜೂನ್ ಕೊನೇ ವಾರದಲ್ಲಿ ಸಮಸ್ಯೆಗೆ ಮುಕ್ತಿ ನೀಡಿ ಹಿಂದಿನ ಮಾದರಿಯಲ್ಲೇ ಗ್ರಾಪಂ ಮೂಲಕವೇ 9/11 ವ್ಯವಸ್ಥೆ ನಡೆಯಲಿದೆ ಎಂದು ಹೇಳಿದ್ದಾರೆ.







































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top