ಪುತ್ತೂರು: ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಎ.ಆರ್.ಎಸ್.ಐ ಆಗಿದ್ದು ನಿವೃತ್ತಿಗೊಂಡ ನಾರಾಯಣ ಗೌಡ ಮತ್ತು ಎ.ಎಸ್.ಐ ಆಗಿ ಪದೋನ್ನತಿ ಹೊಂದಿ ಸಂಪ್ಯ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಪರಮೇಶ್ವರ ಗೌಡ ಅವರಿಗೆ ಠಾಣೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಜಿ.ಜೆ, ಮಹಿಳಾ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಸುನಿಲ್ ಕುಮಾರ್, ಸಂಚಾರ ಪೊಲೀಸ್ ಠಾಣೆಯ ಎಸ್.ಐ ಸೈಯದ್ ಅಪ್ರೀದಿ ಶುಭ ಹಾರೈಸಿದರು. ಹೆಡ್ಕಾನ್ಸ್ಟೇಬಲ್ ಸ್ಕರಿಯ ಅನಿಸಿಕೆ ವ್ಯಕ್ತಪಡಿಸಿದರು.
ಸಂಚಾರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಮಾರುತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೈಟರ್ ದಿನೇಶ್ ವಂದಿಸಿದರು. ಎಸ್.ಐ ನಂದಕುಮಾರ್, ನಿವೃತ್ತಿ ಗೊಂಡ ಎ.ಆರ್.ಎಸ್.ಐ ನಾರಾಯಣ ಗೌಡ ಅವರ ಪತ್ನಿ ಚಂದ್ರಾವತಿ ಮತ್ತು ಮಕ್ಕಳು ಹಾಗು ಪೊಲೀಸ್ ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.