ಪುತ್ತೂರು: ಪಾಂಚಜನ್ಯ ಯಕ್ಷ ಕಲಾವೃಂದದ ವಾರ್ಷಿಕೋತ್ಸವದ ಅಂಗವಾಗಿ ‘ಶ್ರೀ ಕೃಷ್ಣ ಕಾರುಣ್ಯ ಹಾಗೂ ಮಹಿಷವಧೆ’ ಕನ್ನಡ ಪೌರಾಣಿಕ ಯಕ್ಷಗಾನ ಜೂ.1 ಇಂದು ಸಂಜೆ 5.30 ರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪಕ ಹರೀಶ್ ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಬಳಿಕ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಅವರ ನಿರ್ದೇಶನದಲ್ಲಿ ನಡೆಯುವ ಯಕ್ಷಗಾನಕ್ಕೆ ಭಾಗವತರಾಗಿ ಯೋಗೀಶ್ ಕಡಂಬಳಿತ್ತಾಯ, ಸತೀಶ್ ಇರ್ದೆ, ಚೆಂಡೆ ಮದ್ದಳೆಯಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಹರ್ಷಿತ್ ಕಜೆಕ್ಕಾರ್, ಚಕ್ರತಾಳದಲ್ಲಿ ಯತಿನ್ ಕೆ., ವೇಷಭೂಷಣದಲ್ಲಿ ಪೈವಳಿಕೆ ಗಣೇಶ್ ಕಲಾವೃಂದ ಸಹಕಾರ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
























