ಸಂತ ಫಿಲೋಮಿನಾ  ಕಾಲೇಜಿನ ಪ್ರಥಮ ಬಿ.ಬಿ.ಎ. ವಿದ್ಯಾರ್ಥಿನಿ ಅನಘ ಎಸ್. ರೈ ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ತೇರ್ಗಡೆ

ಪುತ್ತೂರು: ಸಂತ ಫಿಲೋಮಿನಾ  ಕಾಲೇಜಿನ ಪ್ರಥಮ ಬಿ.ಬಿ.ಎ. ವಿದ್ಯಾರ್ಥಿನಿ ಅನಘ ಎಸ್. ರೈ ಕಂಪನಿ ಸೆಕ್ರೆಟರಿಯ ಪ್ರವೇಶ ಪರೀಕ್ಷೆ ಸಿ.ಯಸ್.ಇ.ಇ.ಟಿ. ಯಲ್ಲಿ ತೇರ್ಗಡೆಗೊಂಡಿದ್ದಾರೆ.

ಅನಘ ಎಸ್. ರೈ ಸದಾಶಿವ ರೈ ಮತ್ತು ಧ್ಯಾನ ಎಸ್ ರೈ ದಂಪತಿ ಪುತ್ರಿಯಾಗಿದ್ದು, ಮಗಳ ಸಾಧನೆ ಬಗ್ಗೆ ಹೆತ್ತವರು ಸಂತಸ ವ್ಯಕ್ತ ಪಡಿಸಿದ್ದಾರೆ.

ಅನಘ ಕುರಿತು ಕಾಲೇಜಿನ ಪ್ರಾಂಶುಪಾಲ ವಂ.ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ಅಭಿಪ್ರಾಯ ವ್ಯಕ್ತ ಪಡಿಸಿ, ಪ್ರಥಮ ವರುಷದ ಪ್ರಥಮ ಬ್ಯಾಚ್ ನಲ್ಲಿ ವಿದ್ಯಾರ್ಥಿನಿ ಉತ್ತೀರ್ಣರಾಗಿರುವುದು ಅತಿ ಸಂತಸದ ವಿಷಯ. ಕಾಲೇಜಿನ ವ್ಯವಹಾರ ಆಡಳಿತ ವಿಭಾಗವು ವಿದ್ಯಾಥಿಗಳ ಕೌಶಲ್ಯ ಅಭಿವೃದ್ಧಿ ಕಡೆ ಗಮನ ತೋರುತ್ತಾ ಇಂತಹ ನವ ನವೀನ ವಿಷಯಗಳನ್ನು ನೀಡುತ್ತಾ ಕಾಲೇಜಿನ ಮತ್ತು ಬಿ ಬಿ ಎ ಕೋರ್ಸ್ ನ ಘನತೆ ಮತ್ತು ಗೌರವವನ್ನು ಹೆಚ್ಚಿಸುವ ಕಾರ್ಯ ಮಾಡುತ್ತ ಬಂದಿರುತ್ತದೆ. ಇದು ಶಿಕ್ಷಕರಿಗೆ ಮತ್ತು ಕಾಲೇಜಿಗೆ ವಿದ್ಯಾರ್ಥಿಗಳ ಮೇಲೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top