ಮಡಿಕೇರಿ: ಹತ್ತನೇ ತರಗತಿ ವಿದ್ಯಾರ್ಥಿನಿಯ ರುಂಡ ಕಡಿದು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ
ಆರೋಪಿ ಪ್ರಕಾಶ್ (35) ಕಾಡಿನಲ್ಲಿ ಅವಿತು ಕುಳಿತಿದ್ದ ಎನ್ನಲಾಗಿದೆ.
ಸೋಮವಾರಪೇಟೆಯಲ್ಲಿ ತನ್ನೊಂದಿಗೆ ನಿಶ್ಚಿತಾರ್ಥ ಮು೦ದೂಡಲಾದ ಹಿನ್ನಲೆಯಲ್ಲಿ ಕೋಪಗೊಂಡು ಬಾಲಕಿಯ ತಲೆ ಕಡಿದು ಭೀಕರವಾಗಿ ಹತ್ಯೆ ಮಾಡಿ ಆರೋಪಿ ಪ್ರಕಾಶ್ ಪರಾರಿಯಾಗಿದ್ದ.
ಈ ಬಗ್ಗೆ ಯುವಕನ ಶವ ಪತ್ತೆಯಾಗಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಇದು ಸುಳ್ಳು ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ಪಷ್ಟಪಡಿಸಿದ್ದರು.