ಬೆಳ್ತಂಗಡಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾವನಿಗೆ ಸೊಸೆ ಹಾಗೂ ಆಕೆಯ ತವರು ಮನೆಯವರು ಜೀವ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.
ಮೂಡುಕೋಡಿ ಗ್ರಾಮದ ನಿವಾಸಿ ವೆಂಕಟ್ರಮಣ ಭಟ್ (71) ಎಂಬವರ ಸೊಸೆ ವಸಂತಾ ಯಾನೆ ಮೋಹನಾಕ್ಷಿ, ಸುಮಾರು ಒಂದು ತಿಂಗಳ ಹಿಂದೆ ತನ್ನ ಗಂಡ ಹಾಗೂ ಮನೆಯವರೊಂದಿಗೆ ಗಲಾಟೆ ನಡೆಸಿ ಸಣ್ಣ ಮಗನನ್ನು ಕರೆದುಕೊಂಡು ಆಕೆಯ ತವರು ಮನೆಗೆ ಹೋಗಿದ್ದರು. ಮಂಗಳವಾರ ಬೆಳಿಗ್ಗೆ, ತನ್ನ ದೊಡ್ಡ ಮಗನನ್ನು ಕರೆದುಕೊಂಡು ಹೋಗಲು, ಸೊಸೆ ತನ್ನ ತಾಯಿ ಹಾಗೂ ಸಹೋದರ ಹೇಮೇಶ ಎಂಬವರ ಜತೆ ಬಂದು ಅವ್ಯಾಚ್ಯವಾಗಿ ಬೈದು, ಮಾವ ವೆಂಕಟ್ರಮಣ ಭಟ್ ರಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುತ್ತಾರೆ ಎನ್ನಲಾಗಿದೆ.
ಹಲ್ಲೆಯಿಂದ ಗಾಯಗೊಂಡ ವೆಂಕಟರಮಣ ಭಟ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.