ಬೆಂಗಳೂರು : ಡಿಕೆ ಶಿವಕುಮಾರರಂತಹ ಕಲಾಕಾರ ಕರ್ನಾಟಕದಲ್ಲೇ ಯಾರೂ ಇಲ್ಲ. ಹೀಗೆಂದು ಹೇಳಿದ್ದಾರೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ.
ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಆ ಪ್ರಕರಣದಲ್ಲಿ ಎಸ್ಐಟಿ ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದಂತೆ ಕಾಣ್ಣಿಲ್ಲ. ಕಾರು ಚಾಲಕ ಕಾರ್ತಿಕ್ ಹೇಗೆ ಹೊರಗೆ ಹೋದ್ರು ಅವರನ್ನು ಯಾಕೆ ವಶಕ್ಕೆ ಪಡೆದಿಲ್ಲ? ಚುನಾವಣೆ ಕೊನೆಯಲ್ಲಿ ಏನೋ ಪ್ರಯತ್ನ ಮಾಡಿದ್ರು. ಈ ಎಲ್ಲದರ ಸೂತ್ರದಾರ ಡಿಕೆ ಶಿವಕುಮಾರ ಎಂದು ಆರೋಪಿಸಿದರು.
ಕಾಂಗ್ರೆಸ್ ವಿಧಾನಸಭಾ ಚುನಾವಣೆ ಬಳಿಕ ಲೋಕಸಭಾ ಚುನಾವಣೆಯಲ್ಲೂ ದೊಡ್ಡಮಟ್ಟದಲ್ಲಿ ಪ್ರಯತ್ನ ಮಾಡಿದ್ರು ಆದರೆ ಮೋದಿ ಗ್ಯಾರಂಟಿ ಮುಂದೆ ಇವರದು ಠುಸ್ ಪಟಾಕಿ ಆಗಿದೆ ಎಂದು ಮಾಜಿ ಸಿಎಂ ಡಿವಿ ಲೇವಡಿ ಮಾಡಿದರು.
ದೇವೇಗೌಡರು ಒಬ್ಬ ಮುತ್ಸದ್ದಿ ರಾಜಕಾರಣಿ. ಈ ಪ್ರಕರಣದಲ್ಲಿ ಅವರ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ. ರೇವಣ್ಣ ವಿಷಯದಲ್ಲಿ ಪ್ಲಾನ್ ಆಫ್ ಆಕ್ಷನ್ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಇಲ್ಲವೆಂದು ಹೆಚ್ಡಿ ರೇವಣ್ಣರನ್ನ ಬಲಿಪಶು ಮಾಡುವ ಪ್ರಯತ್ನ ಮಾಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ಹತಾಶೆಯಿಂದ ಕಾನೂನು ತಿರುಚುವ ಕಾರ್ಯ ಸಿದ್ದರಾಮಯ್ಯ ಸರ್ಕಾರ ಮಾಡಿದೆ. ರಾಜಕೀಯವಾಗಿ ಏನೂ ಸಿಗದೇ ಇದ್ದಾಗ ಈ ರೀತಿ ಸಿಡಿ ಬಿಡೋದು ಅತ್ಯಂತ ನೀಚ ಕೆಲಸ. ರಾಜಕೀಯದಲ್ಲಿ ಕೂಡ ಇಂತಹ ಸೀರಿಯಸ್ ಕೇಸ್ ದಿಕ್ಕು ತಪ್ಪುತ್ತದೆ. ಒಮ್ಮೊಮ್ಮೆ ಸಣ್ಣ ಕೇಸ್ಗಳು ಬಹಳ ಸೀರಿಯಸ್ ಆಗುತ್ತದೆ. ಸಮಾಜವನ್ನೇ ಬ್ಲಾಸ್ಟ್ ಮಾಡುವ ಪ್ರಯತ್ನ ಇದು. ಸಿಡಿ ಹಂಚಿಕೆ ಮಾಡಿದಾಗ ಕ್ರಮ ಆಗಬೇಕಿತ್ತು. ಆದರೆ ಆಗಲಿಲ್ಲ. ಈ ಕೇಸ್ನಲ್ಲಿ ಸಿದ್ದರಾಮಯ್ಯ ಡಿಕೆ ಶಿವಕುಮಾರ ಪರ್ದೆ ಕೆ ಪೀಚೆ ಕೆಲಸ ತೆರೆಯ ಹಿಂದೆ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಕೇಸ್ನಿಂದ ನಮಗೆ ಡ್ಯಾಮೇಜ್ ಆಗಿದೆ ನಿಜ. ಆದರೆ ಇವತ್ತು ಅದೇ ಬೌನ್ಸ್ ಬ್ಯಾಕ್ ಆಗಿದೆ. ಅವರೇ ಬ್ಯಾಟಿಂಗ್ ಶುರು ಮಾಡಿದ್ದರು. ನಾವು ಫೀಲ್ಡ್ ಮಾಡಿದ್ದೆವು. ಈಗ ಕ್ಯಾಚ್ ಆಗಿದೆ. ಹಾಗಾಗಿ ಅವರಿಗೆ ಈಗ ಅರ್ಥ ಆಗಿದೆ ನಿಜವಾದ ಕೊಳಕು ಯಾರು ಎಂದೇ ಅವರಿಗೆ ಗೊತ್ತಾಗ್ತಾ ಇಲ್ಲಎಂದು ಹೇಳಿದರು.