ಪುತ್ತೂರು: ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಸಮಿತಿ ಸದಸ್ಯ ಅಕ್ಷಯ್ ರಜಪೂತ್ ಗಡಿಪಾರಿಗೆ ಹೈಕೋರ್ಟ್ ತಡೆ ನೀಡಿದೆ.
ವಿಟ್ಲ ಪೋಲಿಸರು ಚುನಾವಣೆಯ ಒಂದು ದಿನ ಮುಂಚಿತವಾಗಿ ನಡುರಾತ್ರಿ ಮನೆಗೆ ನುಗ್ಗಿ ರಜಪೂತ್ ರನ್ನು ಬಂಧಿಸಿ ಹಾವೇರಿ ಜಿಲ್ಲೆಗೆ ಗಡಿಪಾರು ಮಾಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಹಿರಿಯ ವಕೀಲ ಅರುಣ್ ಶ್ಯಾಮ್ ಗಡಿಪಾರಿಗೆ ಹೈಕೋರ್ಟಿನಲ್ಲಿ ತಡೆ ತಂದಿದ್ದಾರೆ.
ವಕೀಲರಾದ ಪ್ರಾಂತ ನ್ಯಾಯ ಜಾಗರಣ ಕಿಶೋರ್ ಕುಮಾರ್, ಜಿಲ್ಲಾ ನ್ಯಾಯಾ ಜಾಗರಣದ ರಾಜೇಶ್ ಬೊಲ್ಲುಕಲ್ಲು ಸಹಕರಿಸಿದ್ದರು.