ಪುತ್ತೂರು : ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆ ಎಂಬಲ್ಲಿ ಕಿಡಿಗೇಡಿಗಳು ಮನೆಯೊಂದಕ್ಕೆ ಕಲ್ಲು ತೂರಾಟ ನಡೆಸಿ ಪರಾರಿಯಾದ ಘಟನೆ ನಡೆದಿದೆ.
ಗುಮ್ಮಟಗದ್ದೆ ಸೂರಪ್ಪ ಗೌಡ ಎಂಬವರ ಮನೆಗೆ ಕಲ್ಲು ತೂರಾಟ ನಡೆದಿದೆ.
ಮೇ.1 ರಂದು ರಾತ್ರಿ 8.30ರ ವೇಳೆಗೆ ಮನೆ ಮಂದಿ ಮನೆಯೊಳಗಡೆ ಇರುವ ಸಂದರ್ಭದಲ್ಲಿ ಕಲ್ಲು ಬಿಸಾಡಿದ್ದಾರೆ. ಕಲ್ಲು ಮನೆ ಸಿಮೆಂಟ್ ಶೀಟ್ ಛಾವಣಿ ಮೇಲೆ ಬಿದ್ದ ಶಬ್ದ ಕೇಳಿ ಹೊರಗಡೆ ಬಂದಾಗ ಕಿಡಿಗೇಡಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಸಂಪ್ಯ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.