ಎಣ್ಮೂರು: ಎಣ್ಮೂರು ಗ್ರಾಮದ ಹೇಮಳ ಶಾಲಾ ಮತದಾನ ಕೇಂದ್ರದಲ್ಲಿ ಮತದಾನ ಕೇಂದ್ರದ ಒಳಗಾಗಲೀ, ಹೊರಗಾಗಲಿ ಕಾಂಗ್ರೆಸ್ ಪಕ್ಷಕ್ಕೆ ಜನ ಇಲ್ಲದಿರುವ ಕುರಿತು ವರದಿಯಾಗಿದೆ.
ಮತದಾನ ಕೇಂದ್ರದೊಳಗೆ ಪೋಲಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸಬೇಕಾದರೆ ಆ ಮತದಾನ ಕೇಂದ್ರಕ್ಕೆ ಒಳಪಟ್ಟ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಆಗಬೇಕು. ಈ ಕೇಂದ್ರದ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಯಾರೂ ಕಾರ್ಯಕರ್ತರಿರದಿರುವ ಕಾರಣ ಕಾಂಗ್ರೆಸ್ಗೆ ಪೋಲಿಂಗ್ ಏಜೆಂಟ್ ಇಲ್ಲ. ಅದಲ್ಲದೆ ಮತದಾನ ಕೇಂದ್ರಕ್ಕಿಂತ 100 ಮೀಟರ್ ಅಂತರದಲ್ಲಿ ಪಕ್ಷ ಕಾರ್ಯಕರ್ತರು ಕುಳಿತು ಮತದಾರರಿಗೆ ಮಾಹಿತಿ ನೀಡಬಹುದಾದರೂ ಅಲ್ಲಿ ಕಾರ್ಯಕರ್ತರಿಲ್ಲದ ಕಾರಣ ಹೊರಗಡೆಯ ಕಾಂಗ್ರೆಸ್ಗೆ ಜನ ಇಲ್ಲ.
ಇನ್ನು ಈ ಬೂತ್ನಲ್ಲಿ ಎಷ್ಟು ಮಂದಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತಾರೆಂದು ನೋಡಲು ಜೂನ್ 4 ರ ವರೆಗೆ ಕಾಯಬೇಕಾಗಿದೆ.