ರೋಟರಿ ಯುವ ನೇತೃತ್ವದಲ್ಲಿ ನಿರ್ಗತಿಕ ವ್ಯಕ್ತಿಯ ರಕ್ಷಣೆ : ಪುನರ್ವಸತಿ ಕೇಂದ್ರಕ್ಕೆ ರವಾನೆ

ಪುತ್ತೂರು:  ಅನೇಕ ಸಮಯಗಳಿಂದ ಸಂಪ್ಯ ಬಸ್ಸು ನಿಲ್ದಾಣದ ದಲ್ಲಿ ಅನಾರೋಗ್ಯ ಪೀಡಿತ ಸ್ಥಿತಿಯಲ್ಲಿ ಕಂಡುಬಂದ ತಿಮ್ಮಪ್ಪ ಎಂಬವರನ್ನು ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಸಹಕಾರದೊಂದಿಗೆ ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಇಂದು ಸೇರಿಸಲಾಯಿತು.

ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಂಗ ಸೋಮಯ್ಯ ಎಂ. ವೈ ಹಾಗೂ ಎಸ್. ಐ ಜಂಬೂರಾಜ್ ಮಹಾಜನ್ ಅವರ ಸೂಚನೆಯ ಮೇರೆಗೆ ನಿರ್ಗತಿಕ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ. 

ಈಗಾಗಲೇ ಪುತ್ತೂರಿನ ಏಕಕಾಲದಲ್ಲಿ 12 ಮಂದಿ ನಿರ್ಗತಿಕರನ್ನ ಪುನರ್ವವಸತಿ ಕೇಂದ್ರಕ್ಕೆ ಸೇರಿಸುವ ಮೂಲಕ ಮನೆ ಮಾತಾಗಿದೆ. ಪುನರ್ವಸತಿ ಕೇಂದ್ರಕ್ಕೆ ಸೇರಿಸುವ ಮುನ್ನ ಸಂಪ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಶಾ ಅವರ ಮುತುವರ್ಜಿಯಲ್ಲಿ ಡಾ ಆಶಾ ಪುತ್ತೂರಾಯ ಅವರ ಸಹಕಾರದಲ್ಲಿ 15 ದಿನಗಳ ಕಾಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಯಿತು.



































 
 

ಈ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯ ಆಸ್ಕರ್ ಆನಂದ್, ರೋಟರಿಯ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಡಾ. ಹರ್ಷ ಕುಮಾರ್ ರೈ, ಸಂಪ್ಯ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಶಾ ಭಾಗಿಯಾಗಿದ್ದರು. ಕೆಯ್ಯೂರು ಬಜರಂಗದಳದವರು ಆಂಬುಲೆನ್ಸ್ ಸೇವೆ ಒದಗಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top