ಮಂಗಳೂರು : ದಂತ ವೈದ್ಯಕೀಯ ಪದವೀಧರೆ ಯುವತಿಯೋರ್ವರು ನಗರದ ಪಾಂಡೇಶ್ವರದ ಪಿಜಿಯಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಉಳ್ಳಾಲ ತಾಲೂಕಿನ ನರಿಂಗಾನ ನಿವಾಸಿ ಸ್ವಾತಿ ಶೆಟ್ಟಿ (24) ಮೃತ ವೈದ್ಯೆ.
ಬಿಡಿಎಸ್ ಪದವಿ ಪೂರೈಸಿದ್ದ ಸ್ವಾತಿ ಪಾಂಡೇಶ್ವರದ ಕ್ಲಿನಿಕ್ವೊಂದರಲ್ಲಿ ಮಂಗಳವಾರದಿಂದ ಕೆಲಸಕ್ಕೆ ಹಾಜರಾಗಬೇಕಿತ್ತು.
ಸೋಮವಾರ ತಾಯಿ ಜೊತೆಗೆ ಪಾಂಡೇಶ್ವರ ಕ್ಲಿನಿಕ್ಗೆ ಬಂದು ಕೆಲಸದ ಬಗ್ಗೆ ಮಾತನಾಡಿ, ಪಾಂಡೇಶ್ವರ ಪೊಲೀಸ್ ಠಾಣೆ ಹಿಂಭಾಗದ ಪಿಜಿಯಲ್ಲಿ ಸೋಮವಾರ ಸಂಜೆಯಿಂದ ಉಳಿದಿದ್ದರು. ರಾತ್ರಿ ತಾಯಿ ಜೊತೆಗೆ ಮೊಬೈಲ್ನಲ್ಲಿ ಮಾತನಾಡಿ ವಿಪರೀತ ತಲೆನೋವು ಎಂಬುದಾಗಿ ಹೇಳಿದ್ದರು ಎಂದು ತಿಳಿದುಬಂದಿದೆ.