ಪುತ್ತೂರು: ಕಾಂಗ್ರೇಸ್ ನಾಯಕರ ವರ್ತನೆ ಹಾಗೂ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಬಂದು ಹತ್ತು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಗ್ರಾಮದಲ್ಲಿ ಆಗದೇ ಇರುವುದರಿಂದ ಬೇಸತ್ತು ಪಡ್ನೂರು ಗ್ರಾಮ ಹಾಗೂ ಬನ್ನೂರು ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ನ ಸಕ್ರೀಯ ಕಾರ್ಯಕರ್ತ ವಿಜಯ ಪೂಜಾರಿಯವರು ಬಿಜೆಪಿ ಸೇರ್ಪಡೆಗೊಂಡರು.
ಮಾಜಿ ಶಾಸಕ ಸಂಜೀವ ಮಠಂದೂರು ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಯುವರಾಜ್ ಪೆರಿಯತ್ತೋಡಿ, ಶಕ್ತೀ ಕೇಂದ್ರ ಪ್ರಮುಖ್ ನಾಗೇಶ್ ಬನ್ನೂರು, ಪಂಚಾಯಿತಿ ಸದಸ್ಯೆ ರಮಣಿ ಗಾಣಿಗ, ಪಕ್ಷದ ಪ್ರಮುಖರಾದ ಸತೀಶ್, ಬಾಲಕೃಷ್ಣ ಜೋಯಿಷ್, ರಾಧಕೃಷ್ಣ, ಯುವಮೋರ್ಚ ಅಧ್ಯಕ್ಷ ನವೀನ್ ಪಡ್ನೂರು ಮೊದಲಾದವರು ಉಪಸ್ಥಿತರಿದ್ದರು.