ಪುತ್ತೂರು: ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾಗಿ ಜಿ.ಜಗನ್ನಾಥ ರೈ ಆಯ್ಕೆಯಾಗಿದ್ದಾರೆ.
ಶನಿವಾರ ವಕೀಲರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಮೋನಪ್ಪ ಎಂ.ಅಳಿಕೆ, ಕಾರ್ಯದರ್ಶಿಯಾಗಿ ಚಿನ್ಮಯ್ ರೈ (ಅವಿರೋಧ ), ಜೊತೆ ಕಾರ್ಯದರ್ಶಿಯಾಗಿ ಮಮತಾ ಸುವರ್ಣ ಹಾಗೂ ಕೋಶಾಧಿಕಾರಿಯಾಗಿ ಮಹೇಶ್ ಕೆ. ಸವಣೂರು ಚುನಾಯಿತರಾಗಿದ್ದಾರೆ.
ಚುನಾವಣೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದು ಬಳಿಕ ಮತ ಎಣಿಕೆ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ.ಜಗನ್ನಾಥ ರೈ ವಿಜೇತರಾಗಿದ್ದು, ಇನ್ನಿಬ್ಬರು ಸ್ಪರ್ಧಿಗಳು ಪರಾಭವಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಮೋನಪ್ಪ ಎಂ.ಅಳಿಕೆ, ಆಯ್ಕೆಯಾಗಿದ್ದು, ಎದುರಾಳಿ ವಿಶ್ವನಾಥ ನಂದಿಲ, ಪರಾಭವಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಚಿನ್ಮಯ್ ರೈ ಅವಿರೋಧ ಆಯ್ಕೆಗೊಂಡಿದ್ದು ಜತೆ ಕಾರ್ಯದರ್ಶಿಯಾಗಿ ಮಮತಾ ಸುವರ್ಣ ಆಯ್ಕೆಗೊಂಡಿದ್ದು ಹೀರಾ ಉದಯ್ ಪರಾಭವಗೊಂಡಿದ್ದಾರೆ. ಕೋಶಾಧಿಕಾರಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹೇಶ್ ಕೆ. ಸವಣೂರು ಆಯ್ಕೆಗೊಂಡಿದ್ದು, ಚಿದಾನಂದ ರೈ, ಕೊಡಿಂಬಾಡಿ ಪರಾಭವಗೊಂಡಿದ್ದಾರೆ.