ಬೆಳ್ತಂಗಡಿ: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ರಕ್ತ ಸ್ರಾವದಿಂದ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿ ಗಾಯತ್ರಿ (26) ಮೃತಪಟ್ಟವರು.
ಗಾಯತ್ರಿ ಎರಡನೇ ಹೆರಿಗೆಗಾಗಿ ಏ.3 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಏ.4 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅದರೆ ಹೆರಿಗೆ ನಂತರ ವಿಪರೀತ ರಕ್ತ ಸ್ರಾವ ಉಂಟಾಗಿದ್ದು ರಾತ್ರಿ ಸಾವನ್ನಪ್ಪಿದ್ದಾರೆ . ಮೃತ ಮಹಿಳೆಗೆ 3 ವರ್ಷದ ಹೆಣ್ಣು ಮಗುವೊಂದಿದ್ದು ಇದೀಗ ಇಬ್ಬರು ಪುಟ್ಟ ಮಕ್ಕಳು ತಾಯಿಯನ್ನು ಕಳೆದುಕೊಂಡಂತಾಗಿದೆ.