ಸುಳ್ಯ: ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರೊಬ್ಬರು ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದಲ್ಲಿ ನಡೆದಿದೆ.
ಐವತ್ತೊಕ್ಲು ಗ್ರಾಮದ ಮೇಲ್ಪಾಡಿಯ ಚಂದ್ರಶೇಖರ ಮೇಲ್ಪಾಡಿ (35) ಮೃತಪಟ್ಟವರು.
ಹೊಟ್ಟೆನೋವಿನಿಂದ ಬಳಲಿದ್ದ ಅವರನ್ನು ಕಾಣಿಯೂರು ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮೃತರು ಐವತ್ತೊಕ್ಲು ಗ್ರಾಮದ ಒಂದನೇ ವಾರ್ಡ್ ಬೂತ್ ಅಧ್ಯಕ್ಷರಾಗಿ, ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು.