ಪುತ್ತೂರು: ನಿಷೇಧಿತ ಕೇರಳ ಲಾರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಪಡ್ನೂರು ನಿವಾಸಿ ಲಕ್ಷ್ಮಣ ಬಂಧಿತ ವ್ಯಕ್ತಿ
ಇಂದು ಮಧ್ಯಾಹ್ನ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಲಿನೆಟ್ ಜಂಕ್ಷನ್ ಬಳಿ ಪಾನ್ ಬೀಡ ಅಂಗಡಿಯಲ್ಲಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಪುತ್ತೂರು ನಗರ ಪೊಲೀಸ್ ಠಾಣಾ ಉಪನಿರೀಕ್ಷಕ ನಂದಕುಮಾರ್ ಎಂ.ಎಂ. ಹಾಗೂ ಸಿಬ್ಬಂದಿಗಳು ಲಕ್ಷ್ಮಣ ಎಂಬಾತನನ್ನು ವಿಚಾರಿಸಿ 1,550 ಮೌಲ್ಯದ 31 ಲಾಟರಿ ಹಾಗೂ ಮಾರಾಟ ಮಾಡಿದ ಹಣ 1100 ರೂ. ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.