ಪುತ್ತೂರು: ಅಕ್ರಮ ಮದ್ಯ ದಾಸ್ತಾನಿರಿಸಿ ಮಾರಾಟ ಮಾಡುತ್ತಿದ್ದ ಸಂದರ್ಭ ದಾಳಿ ನಡೆಸಿದ ಪೊಲೀಸರು ಓರ್ವವನ್ನು ಬಂಧಿಸಿದ ಘಟನೆ ತಾಲೂಕಿನ ಇರ್ದೆ ಗ್ರಾಮದ ಮೇರ್ವೆಯಲ್ಲಿ ಶನಿವಾರ ನಡೆದಿದೆ.
ಹುಕ್ರಪ್ಪ ಪೂಜಾರಿ ಬಂಧಿತ ಆರೋಪಿ.
ಹುಕ್ರಪ್ಪ ಪೂಜಾರಿ ತನ್ನ ಮನೆಯ ಖಾಲಿ ಜಾಗದಲ್ಲಿ ಅಕ್ರಮವಾಗಿ ಮಧ್ಯ ದಾಸ್ತಾನಿರಿಸಿ ಮಾರಾಟ ಮಾಡುತ್ತಿದ್ದದ್ದನ್ನು ಮಾಹಿತಿ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಸ್ಥಳದಲ್ಲಿದ್ದ ತಲಾ 90 ಎಂಎಲ್ ಮದ್ಯ ತುಂಬಿದ 49 ಸ್ಯಾಚೆಟ್ ಗಳು, 100 ರೂ. ನಗದು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳದಿಂದ ಮೂವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.