ರಷ್ಯಾದ ಮಾಸ್ಕೋದಲ್ಲಿ ರಾಕ್ ಮ್ಯೂಸಿಕ್ ನಡೆಯುವ ಸಂದರ್ಭ ನಡೆಸಿದ ಉಗ್ರರ ದಾಳಿಯನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು, ರಷ್ಯಾದ ಜೊತೆ ನಾವಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ರಷ್ಯಾದ ಮಾಸ್ಕೋದ ಮಾಲ್ ಒಂದರದಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಏಕಾಏಕಿ ಉಗ್ರರು ಭದ್ರತಾ ಸಿಬ್ಬಂದಿಗಳು ಕೊಂದು ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳು, ಮಹಿಳೆಯರು ಎನ್ನದೆ ಗುಂಡಿನ ದಾಳಿ ನಡೆಸಿದ್ದಾರೆ.
ಈ ಘಟನೆ ಸುಮಾರು 70 ಕ್ಕೂ ಅಧಿಕ ಮಂದಿ ಹತರಾಗಿದ್ದು, 150 ಕ್ಕೂ ಅಧಿಕ ಮಂದಿ ಗಾಯಗಗೊಂಡಿದ್ದಾರೆ. ರಷ್ಯಾದ ಇತಿಹಾಸದಲ್ಲಿ ಕಂಡು ಕೇಳರಿಯದ ದಾಳಿ ಇದಾಗಿದೆ ಎಂದು ಹೇಳಲಾಗುತ್ತಿದೆ.