ಪುತ್ತೂರು: ಏಳ್ಮುಡಿ ಮುಖ್ಯರಸ್ತೆಯಲ್ಲಿರುವ ಕೆ.ವಿ.ಶೆಣೈ ಪೆಟ್ರೋಲ್ ಪಂಪ್ ಎದುರು ಕಾರ್ಯಾಚರಿಸುತ್ತಿರುವ ‘ಲಹರಿ’ ಡ್ರೈ ಫ್ರುಟ್ಸ್ ಮಾರಾಟ ಸಂಸ್ಥೆ ನವೀಕೃತ ಮಳಿಗೆಯೊಂದಿಗೆ ನವೀನ ಮಾದರಿಯಲ್ಲಿ ಮಾ.24 ಭಾನುವಾರ ಬೆಳಿಗ್ಗೆ 9.30 ಕ್ಕೆ ಶುಭಾರಂಭಗೊಳ್ಳಲಿದೆ.
ದಶಮಾನೋತ್ಸವದ ಸಂಭ್ರಮದಲ್ಲಿರುವ “ಲಹರಿ’ ಸಂಸ್ಥೆ ದಶಮಾನೋತ್ಸವ ಸಂಭ್ರಮಾಚರಣೆಯನ್ನು ಆಚರಿಸಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯಿ ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡುವರು.
ಮುಖ್ಯ ಅತಿಥಿಗಳಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಮಾಜ ಸೇವಕಿ ಡಾ.ಗೌರಿ ಪೈ, ಪುತ್ತೂರು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ತಾಲೂಕು ಮಹಿಳಾ ಒಕ್ಕಲಿಗ ಸಂಘದ ಅಧ್ಯಕ್ಷೆ ವಾರಿಜಾ ಬೆಳಿಯಪ್ಪ ಗೌಡ, ಶಾಂತೇರಿ ವಿಶ್ವಾಸ್ ಶೆಣೈ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ಲಿಖಿತಾ ಕುಸುಮ್ ತಿಳಿಸಿದ್ದಾರೆ.