ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ವಾಗ್ವಾದ್ ನಡೆದಿದೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ : ಸಾಜ ರಾಧಾಕೃಷ್ಣ ಆಳ್ವ

ಪುತ್ತೂರು: ಇತ್ತೀಚಗೆ ದ.ಕ. ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಯ್ಕೆಯಾದ ನಂತರ ಮತ್ತು ಬಿಜೆಪಿಗೆ ಅರುಣ್ ಕುಮಾರ್ ಪುತ್ತಿಲ ಸೇರ್ಪಡೆಯ ವಿಚಾರವಾಗಿ ಪುತ್ತೂರಿನ ಹಿರಿಯ ಕಿರಿಯ ಕಾರ್ಯಕರ್ತರಲ್ಲಿ ಚರ್ಚಿಸಲು ದ.ಕ. ಜಿಲ್ಲಾಧ್ಯಕ್ಷರು ಪಾರ್ಟಿ ಕಛೇರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕಛೇರಿಗೆ ಬೀಗ ಹಾಕಿದ್ದರೂ ಮತ್ತು ಸಭೆಯಲ್ಲಿ ವಾಗ್ವಾದಗಳೂ ಜಿಲ್ಲಾಧ್ಯಕ್ಷರ ಎದುರಿಗೆ ಆಗಿವೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾದ ವಿಷಯ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಕ್ಷದ ಆಂತರಿಕ ಸಭೆ ಆದ ಕಾರಣ ಪತ್ರಿಕೆ ಮಾಧ್ಯಮದವರಿಗೆ ಅಹ್ವಾನ ಇರಲಿಲ್ಲ ಮತ್ತು ಒಟ್ಟು ಪುತ್ತೂರಿನ ರಾಜಕೀಯ  ಸಾಧಕ ಮತ್ತು ಭಾದಕಗಳ ಬಗ್ಗೆ ಆರೋಗ್ಯಪೂರ್ಣ ಚರ್ಚೆಯಾಗಿದೆ.

ಕೊನೆಗೆ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲರವರು ಸೂಕ್ತವಾದ ಸಲಹೆ ಸೂಚನೆಯನ್ನು ನೀಡಿ ಸಭೆ ಸುಖಾಂತ್ಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಪಾರ್ಟಿಯ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡುತ್ತೇವೆ ಎಂದು ನಿರ್ಧರಿಸಲಾಯಿತು ಎಂದು ಅವರು ತಿಳಿಸಿದ್ದಾರೆ.







































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top