ಶಂಕಿತ ನಕ್ಸಲರ ತಂಡ ಭೇಟಿ | ಎನ್‍ ಐ ಎ ತಂಡದಿಂದ ಕೂಂಬಿಂಗ್

ಮಡಿಕೇರಿ ಠಾಣಾ ವ್ಯಾಪ್ತಿಯ ಕೂಜಿಮಲೆಯಲ್ಲಿ ಶಂಕಿತ ನಕ್ಸಲರ ತಂಡ ಭೇಟಿ ನೀಡಿದ ಬೆನ್ನಲ್ಲೇ ಕಾರ್ಕಳದಿಂದ ನಕ್ಸಲ್ ನಿಗ್ರಹ ದಳ (ಎಎನ್ಎಫ್) ತಂಡ ಆಗಮಿಸಿ, ಕೂಂಬಿಂಗ್ ಆರಂಭಿಸಿದ್ದಾರೆ‌.

ಎಎನ್ಎಫ್ ತಂಡ ಕೂಜಿಮಲೆ ಸಮೀಪದ ಬಾಳುಗೋಡಿನ ಉಪ್ಪುಕಳ, ಕೂಜಿಮಲೆ, ಕಡಮಕಲ್ಲು ಈ ಮೂರು ಪ್ರದೇಶಗಳಿಗೆ ತೆರಳಿ ಕೂಂಬಿಂಗ್ ನಡೆಸಲು ತಯಾರಿ ನಡೆಸಿದ್ದು, ಈಗಾಗಲೇ ಕೂಜಿಮಲೆಯಲ್ಲಿ ಎಎನ್ಎಫ್ ತಂಡ ಕೂಂಬಿಂಗ್ ಆರಂಭಿಸಿದ್ದಾರೆ ಎನ್ನಲಾಗಿದೆ.

ಆರು ಮಂದಿ ಪುರುಷರು, ಇಬ್ಬರು ಮಹಿಳೆಯರನ್ನೊಳಗೊಂಡ ನಕ್ಸಲರು ಎನ್ನಲಾದ ಎಂಟು ಮಂದಿಯ ತಂಡ ಸಶಸ್ತ್ರಧಾರಿಗಳಾಗಿದ್ದು, ಶನಿವಾರ ಸಂಜೆ ಕೂಜಿಮಲೆಯ ಅಂಗಡಿಯೊಂದರಿಂದ ಸಾಮಗ್ರಿ ಪಡೆದುಕೊಂಡಿದ್ದು, ಈ ಮಾಹಿತಿ ಆಧಾರದಲ್ಲಿ ನಕ್ಸಲರಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು, ಎಎನ್ಎಫ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top