ಬೆಳ್ತಂಗಡಿ: ಮೂರು ವರ್ಷ ಮಗುವೊಂದು ಮನೆಯಿಂದ ರಸ್ತೆಗೆ ಬಂದಾಗ ಆಟೋ ರಿಕ್ಷಾ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೋಣಂದೂರಿನ ಪಣಕಜೆಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪಣಕಜೆ ಮುಂಡಾಡಿ ನಿವಾಸಿ ಚಂದ್ರಶೇಖರ್ ಹಾಗೂ ಉಷಾ ದಂಪತಿ ಪುತ್ರ ಕೌಶಿಕ್ ಮೃತಪಟ್ಟ ಮಗು.
ರಸ್ತೆ ಬದಿಯಲ್ಲೇ ಮನೆಯಿದ್ದು, ಯಾರೂ ಇಲ್ಲದ ವೇಳೆ ಮಗು ರಸ್ತೆಗೆ ಓಡಿಬಂದಿದೆ. ಈ ಸಂದರ್ಭ ಬಂದ ಆಟೋ ರಿಕ್ಷಾ ಮಗುವಿಗೆ ಡಿಕ್ಕಿ ಹೊಡದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ
ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.