ಪುತ್ತೂರು: ವಿವೇಕಾನಂದ ಕಾನೂನು ಕಾಲೇಜಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ವತಿಯಿಂದ ಝೀಬ್ರಾ ಪಟ್ಟಿ ಅಳವಡಿಸುವಂತೆ ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಅವರಿಗೆ ಮನವಿ ನೀಡಲಾಯಿತು.
ಕಾಲೇಜಿನ ಎದುರುಗಡೆಯ ರಸ್ತೆಯಲ್ಲಿ ದಾಟಲು ಝೀಬ್ರಾ ಪಟ್ಟಿ ಇಲ್ಲದೆ ಆಗುತ್ತಿರುವ ಸಮಸ್ಯೆ ಹಾಗೂ ರಸ್ತೆಯಲ್ಲಿ ಝೀಬ್ರಾ ಪಟ್ಟಿ ಹಾಕುವಂತೆ, ರಸ್ತೆಯ ಬದಿಯಲ್ಲಿ ವಾಹನಗಳಿಗೆ ನಿಧಾನವಾಗಿ ಚಲಿಸಲು ಫಲಕ ಹಾಕುವ ಬಗ್ಗೆ ಪುತ್ತೂರು ನಗರಸಭೆಯ ಪೌರಾಯುಕ್ತರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾನೂನು ಕಾಲೇಜು ಘಟಕದ ಅಧ್ಯಕ್ಷ ಚೇತನ್, ವಿದ್ಯಾರ್ಥಿ ಪ್ರಮುಖ್ ಸ್ವರ್ಣಗೌರಿ , ಸುಶಾಂತ್, ಶ್ರೀಲಕ್ಷ್ಮೀ, ಅಭಿಷೇಕ್, ಧನುಷ್, ಪ್ರವೀಣ್, ಆಕೃತಿ, ಅಶ್ವಿನಿ ಸದಸ್ಯರು ಉಪಸ್ಥಿತರಿದ್ದರು.