ಬೆಂಗಳೂರು: ಕಟ್ಟಡದಿಂದ ಬಿದ್ದು ನರ್ಸಿಂಗ್ ವಿದ್ಯಾರ್ಥಿಯೋರ್ವರು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೇರಳದ ಎಲ್ಲಂಪ್ಲಾಕಲ್ ನ ಅನಿಲ (19) ಮೃತಪಟ್ಟ ವಿದ್ಯಾರ್ಥಿನಿ.
ಬಿಜು ಹಾಗೂ ಉಡುಂಬಂಜೋಳ ಪಂಚಾಯತ್ ಉಪಾಧ್ಯಕ್ಷೆ ಬೀನಾ ಅವರ ಪುತ್ರಿಯಾಗಿರುವ ಅನಿಲ ಹಾಸ್ಟೇಲ್ ಕಟ್ಟಡದಿಂದ ಬಿದ್ದು ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಲ್ಲಿ ಫಿಸಿಯೋಥೆರಪಿ ವಿದ್ಯಾರ್ಥಿನಿಯಾಗಿದ್ದರು.
ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

























